More

    ದೈಹಿಕ ಶಿಕ್ಷಣ ಅತ್ಯಗತ್ಯ

    ಕಾನಹೊಸಹಳ್ಳಿ: ವಿದ್ಯಾರ್ಥಿಗಳು ಕಲಿಕೆ ಜತೆಯಲ್ಲಿ ದಿನ ನಿತ್ಯ ಯೋಗ್ಯಾಭ್ಯಾಸ ರೂಢಿಸಿಕೊಂಡಾಗ ಮಾನಸಿಕ ಶಕ್ತಿ ಹಾಗೂ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ ಎಂದು ಎಬಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮಾನಸಿಕ ತಜ್ಞ ವಿರೂಪಾಕ್ಷಿ ದೇವರಮನಿ ತಿಳಿಸಿದರು.

    ದಿನ ನಿತ್ಯ ಯೋಗ್ಯಾಭ್ಯಾಸ ರೂಢಿಸಿಕೊಳ್ಳಿ

    ಚಿಕ್ಕಜೋಗಿಹಳ್ಳಿ ಕೇಂದ್ರಿಯ ಜವಹಾರ್ ನವೋದಯ ವಿದ್ಯಾಲಯದಲ್ಲಿ ಭಾನುವಾರ ವಿದ್ಯಾರ್ಥಿಗಳು ಮತ್ತು ಪಾಲಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಗುವಿನ ಬೆಳವಣಿಗೆಯಲ್ಲಿ ಪರಿಸರ ಪಾತ್ರ ನಿರ್ಣಾಯಕವಾಗಿರುತ್ತದೆ. ಪಠ್ಯದ ಜತೆಗೆ ದೈಹಿಕ ಶಿಕ್ಷಣ ಮುಖ್ಯವಾಗಿರುತ್ತದೆ. ಹೀಗಾಗಿ ಮಾನಸಿಕ ಹಾಗೂ ದೈಹಿಕ ಸಧೃಡತೆಗಾಗಿ ಆದ್ಯತೆ ನೀಡಬೇಕು ಎಂದರು.

    ಇದನ್ನೂ ಓದಿ: ಜಿಲ್ಲೆ ಹ್ಯಾಂಡ್‌ಬಾಲ್ ಕ್ರೀಡಾಪಟುಗಳು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ

    ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜುರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ ಎಂದರು. ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಎಂ.ಶರಣಬಸವ, ಡಾ.ಕಲ್ಲೇಶ್ ಪಾಟೇಲ್, ಡಾ.ಮನೋಹರಗೌಡ, ರಮೇಶ್, ಡಾ.ರಾಜಶೇಖರ್, ವಿಜಯಕುಮಾರ್, ನೀಲಕಂಠಚಾರಿ, ಪಿ.ನಾಗರಾಜ್, ಸುನೀಲ್ ಕುಮಾರ್, ನವೀನ್ ಕುಮಾರ್ ವೈ.ಎಂ, ಚೈತ್ರಾ, ಗಾಳಿ ಉದಯ, ತ್ರಿಶೂಲ್, ಲೋಹ ಗಿರೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts