More

    ಕಲೆ ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿ- ಪಿಎಸೈ ತಿಮ್ಮಣ್ಣ ಚಾಮನೂರು ಅಭಿಪ್ರಾಯ

    ಕಾನಹೊಸಹಳ್ಳಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ನೈಜ ಕಲಾಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಪಿಎಸೈ ತಿಮ್ಮಣ್ಣ ಚಾಮನೂರು ತಿಳಿಸಿದರು.
    ಹುಲಿಕೆರೆ ಶಾಲಾವರಣದಲ್ಲಿ ಸೋಮವಾರ ಆಯೋಜಿಸಿದ್ದ ಹೊಸಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಠ್ಯದ ಜತೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳೂ ಬೇಕು. ಇದು ಮಕ್ಕಳ ಮಾನಸಿಕ ಮತ್ತು ಬೌದ್ದಿಕ ಶಕ್ತಿ ವೃದ್ದಿಗೆ ಸಹಕಾರಿಯಾಗುತ್ತದೆ ಎಂದರು.

    ಕಾನಾಮಡುಗು ದಾಸೋಹ ಮಠದ ಧರ್ಮಧಿಕಾರಿ ಐಮುಡಿ ಶರಣಾರ್ಯ ಸಾನ್ನಿಧ್ಯ ವಹಿಸಿ, ಮಕ್ಕಳಲ್ಲಿನ ಕಲಿಕಾ ಕ್ಷಮತೆ ಹೆಚ್ಚಿಸಲು ಶಿಕ್ಷಕರು ಶ್ರಮಿಸಬೇಕು ಎಂದರು.

    ಗ್ರಾಪಂ ಅಧ್ಯಕ್ಷ ಮಾರಪ್ಪ, ಸಿಆರ್‌ಪಿ ಲೋಕೇಶ್, ಅನುಪಮ, ಮುಖ್ಯಶಿಕ್ಷಕರಾದ ಡಿ.ವಿಮಲಕ್ಷಿ, ಶ್ಯಾ ಸುಂದರ, ಸಫಾರೆ, ಶೇಖರಪ್ಪ, ಗೋಪಾಲಕೃಷ್ಣ, ಗೌಡ್ರ ಕೊಟ್ರೇಶ್, ನಿವೃತ್ತ ಶಿಕ್ಷಕರಾದ ಚಂದ್ರಣ್ಣ, ಚಿದಾನಂದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಶಿವಣ್ಣ, ರಮೇಶ್‌ಗೌಡ, ದುರುಗೇಶ್ ಸೇರಿದಂತೆ ಹಲವು ಮುಖಮಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts