More

  ದೇವರ ದಾಸಿಮಯ್ಯ ಆದರ್ಶ ಅಳವಡಿಸಿಕೊಳ್ಳಿ

  ಕಂಪ್ಲಿ: ದೇವರ ದಾಸಿಮಯ್ಯರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ದೇವಾಂಗ ಸಮಾಜದ ಅಧ್ಯಕ್ಷ ಗದ್ಗಿ ವಿರುಪಾಕ್ಷಿ ಹೇಳಿದರು.

  ದೇವಾಂಗ ಸಮಾಜದ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ ಭಾನುವಾರ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ದೇವರ ದಾಸಿಮಯ್ಯ ಹಲವು ಸಮಾಜ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ರಾಜ್ಯದಲ್ಲಿ ದೇವಾಂಗ ಸಮುದಾಯದವರು ರಾಜಕೀಯ, ಶಿಕ್ಷಣ, ಔದ್ಯೋಗಿಕ, ಆರ್ಥಿಕ ಸೇರಿ ನಾನಾ ಕ್ಷೇತ್ರಗಳಲ್ಲಿ ಹಿಂದುಳಿದವರಾಗಿದ್ದಾರೆ. ನೇಕಾರಿಕೆಯೊಂದಿಗೆ ಆಧುನಿಕ ಉದ್ಯೋಗನಿರತರಾಗಿದ್ದಾರೆ. ರಾಜ್ಯದ ಸಮಸ್ತ ದೇವಾಂಗ ಸಮಾಜದವರ ಅಭಿವೃದ್ಧಿಗಾಗಿ ರಾಜ್ಯ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಲ್ಲಿ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

  ದೇವಾಂಗ ಮಠದ ಮಂಜುನಾಥ ಸ್ವಾಮಿ, ಅರ್ಚಕ ಮಿಟ್ಟಿ ಶಂಕರ್, ಸಂಘದ ಪದಾಧಿಕಾರಿಗಳಾದ ದೂಪದ ಸುಭಾಶ್ಚಂದ್ರ, ವಣಕಿ ವೆಂಕಟೇಶ್, ಬಂಗಿ ಸಣ್ಣ ಮಂಜುನಾಥ, ಕಾಳ್ಗಿ ನಾರಾಯಣಪ್ಪ, ಮಸ್ಕಿ ಅಂಬರೀಷ, ಕುಚ್ಚ ಸುರೇಶ್, ವಣಕಿ ಶಂಕರ್, ಶೀಲವಂತರ ರಾಮಚಂದ್ರ, ಕರಡಕಲ್ ವಿರುಪಣ್ಣ, ಕಾಳ್ಗಿ ಜಗದೀಶ್, ಎಂ.ರಾಜೇಶ್, ಓದಾ ಅಂಬರೀಷ, ಓದಾ ವಿರುಪಾಕ್ಷಿ ಗದ್ಗಿ ಶ್ರೀನಿವಾಸ್, ಹಂಪರಗುಂದಿ ನಾಗರಾಜ, ಓದಾ ಬಸವರಾಜ, ರವಿಚಂದ್ರ, ನಿಖಿಲ್ ಚಂದ್ರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts