ಯಲಬುರ್ಗಾ: ಪ್ರವಚನ, ಚಿಂತನಾಗೋಷ್ಠಿಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಮರಕಟ್ ಗ್ರಾಮದ ಶಿವಾನಂದ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಚನ ಚಿಂತನ ಗೋಷ್ಠಿಯಲ್ಲಿ ಮಾತನಾಡಿದರು. ಮೌಢ್ಯತೆ, ಅಸ್ಪ್ರಶ್ಯತೆ, ಅಸಮಾನತೆ ವಿರುದ್ಧ ವಚನ ಕ್ರಾಂತಿ ಮಾಡಿದ ಬಸವಾದಿ ಶರಣರ ಆದರ್ಶ ಮೈಗೂಡಿಸಿಕೊಳ್ಳಬೇಕು. ಬಸವಣ್ಣರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಪ್ರಮುಖರಾದ ಹನುಮಗೌಡ ಬಳ್ಳಾರಿ, ಷಣ್ಮುಖಪ್ಪ ಬಳ್ಳಾರಿ, ಪಂಪನಗೌಡ ಮಾಲಿ, ಶರಣಪ್ಪ ಮೇಟಿ, ಶರಣಪ್ಪ ಬಳ್ಳಾರಿ, ಪೀರ್‌ಸಾಬ್ ಮುಲ್ಲಾರ್ ಇತರರಿದ್ದರು.