More

    ಕನ್ನಡ ಬಳಸಿ ಭಾಷಾ ಶ್ರೇಷ್ಠತೆ ಮುನ್ನಡೆಸಿ

    ಕಂಪ್ಲಿ: ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಬಳಸುವ ಮೂಲಕ ಶ್ರೇಷ್ಠತೆಯನ್ನು ಮುನ್ನಡೆಸಬೇಕಿದೆ ಎಂದು ತಹಸೀಲ್ದಾರ್ ಶಿವರಾಜ ಹೇಳಿದರು.

    ತಾಲೂಕಿನ ಗಡಿ ಸೋಮಲಾಪುರ ಕ್ರಾಸ್ ಬಳಿ ಸೋಮವಾರ ಕರ್ನಾಟಕ 50 ಸಂಭ್ರಮದ ಜ್ಯೋತಿ ರಥಯಾತ್ರೆಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಮ್ಮಿಗನೂರು ಗ್ರಾಮದಲ್ಲಿ ಕನ್ನಡ ಜ್ಯೋತಿರಥವನ್ನು ಭವ್ಯವಾಗಿ ಸ್ವಾಗತಿಸಿದರು.

    ಶಾಲಾ ಮಕ್ಕಳು ಹಾಡು, ನೃತ್ಯದ ಮೂಲಕ ಬೀಳ್ಕೊಟ್ಟರು. ನೆಲ್ಲೂಡಿ, ಕೊಟ್ಟಾಲ್ ಮೂಲಕ ಆಗಮಿಸಿದ ರಥವನ್ನು ಕಂಪ್ಲಿಯ ತಹಸಿಲ್ ಕಚೇರಿ ಮುಂಭಾಗದಲ್ಲಿ ಸ್ವಾಗತಿಸಿ ಪಟ್ಟಣದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ ಮಕ್ಕಳ ಛದ್ಮವೇಷ, ಹಗಲು ವೇಷಧಾರಿಗಳು, ಡೊಳ್ಳು ಕುಣಿತ, ತಾಷಾರಾಂಡೋಲ್, ಕನ್ನಡ ಧ್ವಜ ಹಿಡಿದು ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

    ಶಾಸಕ ಜೆ.ಎನ್.ಗಣೇಶ್, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಅಧ್ಯಕ್ಷ ಬಿ.ಅಂಬಣ್ಣ, ಕನ್ನಡಪರ ಸಂಘಟನೆಗಳ ಪ್ರಮುಖರಾದ ಸಿ.ಆರ್.ಹನುಮಂತ, ಡಾ.ಎ.ಸಿ.ದಾನಪ್ಪ, ಬಿ.ವಿ.ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts