More

    ಕ್ಷಯ ಮುಕ್ತ ರಾಜ್ಯ ಮಾಡಲು ಸಹಕರಿಸಿ

    ಕಂಪ್ಲಿ: 2025ರೊಳಗೆ ಕ್ಷಯ ಮುಕ್ತ ರಾಜ್ಯ ಮಾಡಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞ ರವೀಂದ್ರ ಕನಕೇರಿ ಹೇಳಿದರು.

    ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವಿಶ್ವ ಕ್ಷಯ ದಿನಾಚರಣೆ ನಿಮಿತ್ತ ಗುರುವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕಫ ಪರೀಕ್ಷೆ ಮಾಡಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಕ್ಷಯ ರೋಗವನ್ನು ಉಪೇಕ್ಷಿಸಬಾರದು ಎಂದರು.

    ಫಿಜಿಷಿಯನ್ ಡಾ.ರುದ್ರೇಶ್, ಆಯಷ್ ವೈದ ಮಲ್ಲೇಶಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚನ್ನಬಸವರಾಜ, ಪ್ರಭಾಕರ, ಪಿಎಚ್‌ಸಿಒ ಸುನಿತಾ, ಉಮಾದೇವಿ, ಲಕ್ಷಿ, ಲ್ಯಾಬ್ ಟೆಕ್ನಿಷಿಯನ್ ಮಹಾಂತೇಶ್, ಟಿಬಿಎಚ್‌ವಿ ಪರಿಮಳಾ, ಆಶಾ ಕಾರ್ಯಕರ್ತೆಯರಿದ್ದರು.

    ದೇವಸಮುದ್ರ: ಗ್ರಾಮದಲ್ಲೂ ಕೂಡ ವಿಶ್ವ ಕ್ಷಯ ರೋಗ ದಿನಾಚರಣೆ ಜಾಗೃತಿ ಜಾಥಾ ಜರುಗಿತು. ವೈದ್ಯಾಧಿಕಾರಿ ರೇವಣಸಿದ್ಧ ಕೋರಿ, ಮುಖ್ಯಶಿಕ್ಷಕ ಶಕುಂತಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಜಗನ್ನಾಥ್, ಲ್ಯಾಬ್‌ಟೆಕ್ನಿಷಿಯನ್ ಚನ್ನಬಸವರಾಜ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts