More

    ತಂಬಾಕು ರಹಿತ ಪಟ್ಟಣಕ್ಕೆ ಪಣ

    ಕಂಪ್ಲಿ: ಪಟ್ಟಣವನಾವನ್ನು ತಂಬಾಕು ರಹಿತ ಮಾಡಲು ಯುವಜನತೆ ಪಣ ತೊಡಬೇಕಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಹೇಳಿದರು.

    ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ತಂಬಾಕು ನಿಷೇಧ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಬೇಕಿದೆ. ಯುವಜನತೆ ತಂಬಾಕು ಸೇವನೆಯಿಂದ ಸಂಪೂರ್ಣ ದೂರವಾಗಬೇಕು. ಅತ್ಯುತ್ತಮ ದೇಶದ ನಿರ್ಮಾಣದಲ್ಲಿ ಆರೋಗ್ಯವಂತ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ಸಿಗರೇಟು ಸೇರಿ ತಂಬಾಕು ಸೇವನೆಯ ದೃಶ್ಯಗಳ ವೀಕ್ಷಣೆ ಮತ್ತು ಅನುಕರಣೆಯಿಂದ ವಿಮುಖರಾಗಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಧಿಕಾ ಮಾತನಾಡಿ, ತಂಬಾಕು ಸೇವನೆಯಿಂದ ಪರಿಸರ ಮಾಲಿನ್ಯದ ಜತೆಗೆ ಸೇವಿಸುವವರು ಬಾಯಿ, ಗಂಟಲು, ಶ್ವಾಸಕೋಶಗಳ ಕ್ಯಾನ್ಸರ್‌ಗೆ ಬಲಿಯಾಗಬೇಕಾಗುತ್ತದೆ. ತಂಬಾಕು ಸೇವಿಸುವವರಿಂದ, ಧೂಮಪಾನಿಗಳಿಂದಾಗಿ ಶೇ.10 ಜನ ಪರೋಕ್ಷ (ಪ್ಯಾಸಿವ್)ಧೂಮಪಾನಿಗಳು ಬಲಿಯಾಗುತ್ತಿರುವುದು ವಿಷಾದನೀಯ. ಯುವಜನತೆ ತಂಬಾಕು ಸೇವನೆಯಿಂದ ದೂರವಾಗಬೇಕು ಎಂದರು.

    ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆ ಮಕ್ಕಳು, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ತ್ರೀಶಕ್ತಿ ಗುಂಪುಗಳ ಸೇವಾ ಪ್ರತಿನಿಧಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts