More

    ಮಾಧವ ತೀರ್ಥರ ಮಧ್ಯಾರಾಧನೆ ಸಂಪನ್ನ,

    ಕಂಪ್ಲಿ: ಮಂತ್ರಾಲಯ ಮಠದ ಪರಂಪರೆಯ ಯತಿಗಳಾದ ಶ್ರೀ ಮಾಧವ ತೀರ್ಥರ ಮಧ್ಯಾರಾಧನಾ ಸಮಾರಂಭ ಕೋಟೆ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿ ಭಾನುವಾರ ಶ್ರದ್ಧೆ, ಭಕ್ತಿಯಿಂದ ಜರುಗಿತು.

    ಶ್ರೀಮಠದ ಬೆಂಗಳೂರಿನ ಪಂಡಿತರಾದ ವೇದವ್ಯಾಸಾಚಾರ್ ಉಪನ್ಯಾಸ ನೀಡಿ, ಮಾಧವ ತೀರ್ಥರು ಶ್ರೀಮನ್ ಮಧ್ವಾಚಾರ್ಯರ ನೇರ ಶಿಷ್ಯರಾಗಿದ್ದರು. ಮಾಧವತೀರ್ಥರು ನಾಲ್ಕು ವೇದಗಳನ್ನು ಅಂತರ್ಗತ ಮಾಡಿಕೊಂಡ ಮಹಾಜ್ಞಾನಿಗಳಾಗಿದ್ದರು. ಹಂಪಿಯ ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಮಾಧವತೀರ್ಥರ ಸಂಕಲ್ಪ ಶಕ್ತಿ ಕಾರಣವಾಗಿತ್ತು ಎಂದರು.

    ಮಾಧವತೀರ್ಥರ ಮೂಲ ಬೃಂದಾವನವನ್ನು ಫಲ-ಪುಷ್ಪ, ತುಳಸಿಮಾಲೆ, ತಳಿರು-ತೋಣಗಳಿಂದ ಅಲಂಕರಿಸಲಾಗಿತ್ತು. ಅರ್ಚಕ ಸುಧೀಂದ್ರ ಜೋಷಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts