More

    ಸುಗಮ ಸಂಚಾರಕ್ಕೆ ಕಂಪ್ಲಿಯ ಡಾ.ಅಂಬೇಡ್ಕರ್ ವೃತ್ತ ನವೀಕರಣ: ಒಪ್ಪಿಗೆ ಸೂಚಿಸಿದ ದಲಿತ ಮುಖಂಡರು, ಪುರಸಭೆ ಸಿದ್ಧತೆ

    ಕಂಪ್ಲಿ: ಸುಗಮ ಸಂಚಾರಕ್ಕಾಗಿ ಇಲ್ಲಿನ ಪುರಸಭೆ ಕಚೇರಿ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ನವೀಕರಣಕ್ಕೆ ದಲಿತ ಸಂಘಟನೆಗಳ ಮುಖಂಡರು ಒಪ್ಪಿಗೆ ಸೂಚಿಸಿದ್ದು, ಕಾಮಗಾರಿ ಕೈಗೊಳ್ಳಲು ಪುರಸಭೆ ತೀರ್ಮಾನಿಸಿದೆ.

    2010ರ ಆ.15ರಂದು ಆಗಿನ ಶಾಸಕ ಟಿ.ಎಚ್.ಸುರೇಶ್‌ಬಾಬು, ಡಾ.ಅಂಬೇಡ್ಕರ್ ವೃತ್ತವನ್ನು ಉದ್ಘಾಟಿಸಿದ್ದರು. ರಸ್ತೆ ಮಧ್ಯೆ ವಿಭಿನ್ನ ಮಾದರಿಯಲ್ಲಿ ವೃತ್ತ ನಿರ್ಮಿಸಿ ಕಬ್ಬಿಣದ ಸರಳಿನ ಆವರಣ ಅಳವಡಿಸಲಾಗಿತ್ತು. ಉದ್ದನೆಯ ಸರಕು ಸಾಗಿಸುವ ವಾಹನಗಳು ವೃತ್ತದ ತಿರುವಿನಲ್ಲಿ ಸಾಗುವಾಗ ಅನೇಕ ಬಾರಿ ಸರ್ಕಲ್‌ನ ಕಬ್ಬಿಣ ಸರಳುಗಳಿಗೆ ತಾಗಿ ಜಖಂ ಆಗುತ್ತಿತ್ತು. ಅಲ್ಲದೆ ವೃತ್ತ ಗಾತ್ರದಲ್ಲಿ ದೊಡ್ಡದಾಗಿದ್ದರಿಂದ ವೃತ್ತದ ತಿರುವಿನ ವೇಳೆ ಅಪಘಾತಗಳೂ ಆಗುತ್ತಿದ್ದವು. ಹೀಗಾಗಿ ನವೀಕರಣಕ್ಕೆ ಪುರಸಭೆ ಯೋಚಿಸಿತ್ತು. ಈ ಸಂಬಂಧ ಆ.11ರಂದು ಏರ್ಪಡಿಸಿದ್ದ ದಲಿತ ಮುಖಂಡರು ಹಾಗೂ ಪುರಸಭೆ ಸದಸ್ಯರ ಸಭೆಯಲ್ಲಿ ನವೀಕರಣಕ್ಕೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು. ಹೀಗಾಗಿ ಪುರಸಭೆ ನವೀಕರಣ ಕೈಗೊಳ್ಳಲು ಮುಂದಾಗಿದ್ದನ್ನು ಸ್ಥಳೀಯರು ಸ್ವಾಗತಿಸಿದ್ದಾರೆ.

    ಡಾ.ಅಂಬೇಡ್ಕರ್ ವೃತ್ತವನ್ನು ಆಧುನಿಕ ಮಾದರಿಯಲ್ಲಿ ನವೀಕರಿಸಬೇಕು ಎಂದು ದಲಿತ ಮುಖಂಡರು ಕೋರಿದ್ದಾರೆ. ವೃತ್ತ ಬಳಿಯ ಪಾದಚಾರಿ ರಸ್ತೆಯ ಅಗಲವನ್ನು ಕಡಿತಗೊಳಿಸಲಾಗುವುದು. ವಾಹನಗಳ ಸಂಚಾರಕ್ಕೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ವೃತ್ತ ನಿರ್ಮಿಸುವಂತೆ ಪುರಸಭೆ ಸದಸ್ಯರ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಿದ್ದೇವೆ.
    | ಸಿ.ಆರ್.ಹನುಮಂತ ಪುರಸಭೆ ಸದಸ್ಯ, ಕಂಪ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts