More

    ಶಿಲ್ಪಿಗಳಿಗೆ ಮೂಲಸೌಕರ್ಯ ಒದಗಿಸುವಂತೆ ವಿಶ್ವಕರ್ಮ ಸಮಾಜ ಸಂಘದ ಕಾರ್ಯದರ್ಶಿ ಡಿ.ಮೌನೇಶ್ ಮನವಿ

    ಕಂಪ್ಲಿ: ಶಿಲ್ಪಿಗಳಿಗೆ ಕೈಕಸಬು ಮತ್ತು ಜೀವನೋಪಾಯಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಇಲ್ಲಿನ ವಿಶ್ವಕರ್ಮ ಸಮಾಜ ಸಂಘದ ಕಾರ್ಯದರ್ಶಿ ಡಿ.ಮೌನೇಶ್ ಆಗ್ರಹಿಸಿದರು.

    ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಶಿಲ್ಪಿ, ಪಂಚ ವೃತ್ತಿ ಕುಲ ಕಸಬುದಾರರಿಗೆ ರಿಯಾಯಿತಿ ಸಾಲ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮುಂದಾಗಬೇಕು. ಕಂಪ್ಲಿಯ ಕಾಳಿಕಾಮಠೇಶ್ವರಿ ದೇವಸ್ಥಾನದ ಅನ್ನಪೂರ್ಣ ನಿಲಯದ ದುರಸ್ತಿಗೆ ಶಾಸಕರು ಅನುದಾನ ಒದಗಿಸುವಂತೆ ಒತ್ತಾಯಿಸಿದರು.

    ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಶಿಲ್ಪಿಗಳು ತಮ್ಮ ವೃತ್ತಿ ನೈಪುಣ್ಯತೆಗಾಗಿ ಉನ್ನತ ಹುದ್ದೆಯೊಂದಿಗೆ ಉನ್ನತ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದರು. ಜಕಣಾಚಾರಿ ಜಯಂತಿ ನಿಮಿತ್ತ ಮೆಟ್ರಿಯ ಶಿಲ್ಪಿ ಎನ್.ಗಣೇಶ್ ಇವರನ್ನು ಗೌರವಿಸಲಾಯಿತು.

    ವಿಶ್ವಕರ್ಮ ಸಮುದಾಯದ ಜಗದ್ಗುರು ಕಾಳಹಸ್ತ್ಯೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ತಹಸೀಲ್ದಾರ್ ಗೌಸಿಯಾಬೇಗಂ, ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಡಿ.ಹಿರೇಹಾಳ್ ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಪ್ರಮುಖರಾದ ರಾಮಚಂದ್ರಶಾಸ್ತ್ರಿ, ಡಿ.ರವಿ, ಡಿ.ರಾಘವೇಂದ್ರ, ಡಿ.ಕೃಷ್ಣ, ಎಂ.ಮಂಜುನಾಥಾಚಾರ್, ಯಂಕಣ್ಣಾಚಾರ್, ಮೆಟ್ರಿ ವೀರಭದ್ರಾಚಾರ್, ಚಂದ್ರಶೇಖರಾಚಾರ್, ನಾರಾಯಣಾಚಾರ್ ಸೇರಿ ವಿಶ್ವಕರ್ಮ ಸಮುದಾಯದವರು, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts