More

    ಕವಿತೆಗಳು ಪ್ರಸ್ತುತ ಸಮಾಜದ ಕನ್ನಡಿಯಾಗಲಿ: ಹಿರಿಯ ಕವಿ ಜಿ.ಪ್ರಕಾಶ್ ಅಭಿಮತ

    ಕಂಪ್ಲಿ: ಪಟ್ಟಣದ ಗಂಗಾ ಸಂಕೀರ್ಣದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ಶುಕ್ರವಾರ ರಾಜ್ಯೋತ್ಸವ ಕವಿಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಒಂಬತ್ತು ಕವಿಗಳು ಕವಿತೆಗಳನ್ನು ಮಂಡಿಸಿದರು. ವರ್ತಮಾನದ ವಿದ್ಯಮಾನ, ತಲ್ಲಣಗಳನ್ನು ಕವಿತೆ ಸಾಲುಗಳ ಮೂಲಕ ಮಂಡಿಸಿ ಶೋತೃಗಳ ಗಮನಸೆಳೆದರು.

    ಹಿರಿಯ ಕವಿ ಜಿ.ಪ್ರಕಾಶ್ ಮತ ಹಾಕ್ತೇನೆ ಕವಿತೆ ಮಂಡಿಸುತ್ತ ಕಳೆದ 60 ವರ್ಷಗಳಿಂದ ನಾನು ಮತ ಹಾಕುತ್ತಿದ್ದು ನಾನು ಆರ್ಥಿಕವಾಗಿ ಸಬಲನಾಗಲಿಲ್ಲ. ಮತ ಹಾಕಿಸಿಕೊಂಡವರು ಮಾತ್ರ ಹತ್ತಾರು ತಲೆಮಾರು ಕುಳಿತು ತಿನ್ನುವಷ್ಟು ಗಳಿಸಿದ್ದಾರೆಂದು, ಶಿಕ್ಷಕರಾದ ವೀರಮ್ಮ ನಾಗರಾಜ ಕೆಂಪು ದೀಪ ವಾಚಿಸಿ ಹೆಣ್ಣಿನ ಮೇಲಾಗುವ ದೈಹಿಕ, ಮಾನಸಿಕ ಶೋಷಣೆಯನ್ನು, ಎನ್.ಶಿವಲೀಲಾ ಕರ್ನಾಟಕ ರತ್ನ ಕವಿತೆಯ ಮೂಲಕ ಪುನೀತ್‌ರಾಜ್‌ಕುಮಾರ್ ಜೀವನ ಸಾಧನೆಯನ್ನು, ಎಸ್.ಶ್ಯಾಮಸುಂದರರಾವ್ ಅಂದು ಇಂದು ಕವಿತೆ ಮೂಲಕ ಬದಲಾದ ಕನ್ನಡದ ಅಸ್ಮಿತೆಯನ್ನು, ಚಂದ್ರಯ್ಯ ಕನ್ನಡಮಾತೆ ಕವಿತೆ ಮೂಲಕ ನಾಡಿನ ಹಿರಿಮೆಗರಿಮೆಯನ್ನು, ರಾಜು ಬಿಲಂಕರ್ ಚುಟುಕುಗಳ ಮೂಲಕ ಪ್ರಸ್ತುತ ಸಮಾಜದ ಸ್ಥಿತಿಗತಿ, ಕೌಟುಂಬಿಕ ಸಾಮರಸ್ಯವನ್ನು, ಈರಪ್ಪ ಸೊರಟೂರು ಆತ್ಮಗೌರವ ಎಲ್ಲಿದೆ ಕವಿತೆ ಮೂಲಕ ವಿನಾಕಾರಣ ಟೀಕಿಸುವವರ ನೈತಿಕತೆಯನ್ನು ಪ್ರಶ್ನಿಸುವ ಸಾಲುಗಳನ್ನು, ಅಶೋಕ್ ಕುಕನೂರು ಬಾಲ್ಯ ಜೀವನ ಆಶುಕವಿತೆಯನ್ನು, ಬಂಗಿ ದೊಡ್ಡ ಮಂಜುನಾಥ ಬದುಕು ಕವಿತೆಯನ್ನು ಮಂಡಿಸಿದರು.

    ಸಾಹಿತ್ಯ ಸಿರಿ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆ ವಹಿಸಿ, ಕವಿತೆಗಳು ಪ್ರಸ್ತುತ ವಿದ್ಯಮಾನಗಳಿಗೆ ಕನ್ನಡಿಯಾಗಬೇಕು. ಬದುಕನ್ನು ಪ್ರೀತಿಸುವ, ಕಷ್ಟಗಳನ್ನು ಎದುರಿಸುವ ಮನೋಭಾವಗಳನ್ನು ಪ್ರೇರೇಪಿಸಬೇಕು ಎಂದರು.

    ಸಿಆರ್‌ಪಿ ರೇಣುಕಾರಾಧ್ಯ ಮಾತನಾಡಿ, ಪೋಷಕರು ಆಂಗ್ಲಮಾಧ್ಯಮ ವ್ಯಾಮೋಹ ತೊರೆದು ಮಾತೃಭಾಷೆಯ ಮಾಧ್ಯಮದ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು ಎಂದರು. ಈರಪ್ಪ ಸೊರಟೂರು ನಿರೂಪಿಸಿದರು. ಪ್ರಮುಖರಾದ ಕವಿತಾಳ ಬಸವರಾಜ, ಯು.ಎಂ.ವಿದ್ಯಾಶಂಕರ್, ಬೂದಗುಂಪಿ ಹುಸೇನ್‌ಸಾಬ್, ಎಲಿಗಾರ ವೆಂಕಟರೆಡ್ಡಿ, ಕೆ.ಯಂಕಾರೆಡ್ಡಿ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts