More

    ಸೇತುವೆ ಮೇಲೆ ಪಾದಚಾರಿಗಳ ಸಂಚಾರ ಆರಂಭ

    ಕಂಪ್ಲಿ: ತುಂಗಭದ್ರಾ ನದಿಗೆ ಜಲಾಶಯದಿಂದ ನದಿಗೆ ಶುಕ್ರವಾರ 55 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದ್ದು, ಸೇತುವೆ ನೀರಿನಿಂದ ಮುಕ್ತಗೊಂಡಿದೆ.

    ಜು.13ರಿಂದ ಸೇತುವೆ ಮುಳುಗಿದ್ದರಿಂದ ಸಂಚಾರ ನಿಷೇಧಗೊಳಿಸಲಾಗಿತ್ತು. ಗಂಗಾವತಿಗೆ ತೆರಳಲು ಬುಕ್ಕಸಾಗರ ಬಳಿಯ ಕಡೇಬಾಗಿಲು ಮೂಲಕ ಸುತ್ತು ಬಳಸಿ ಸಂಚರಿಸಬೇಕಿತ್ತು. ಇದೀಗ ರೋಗಿಗಳು, ಕೃಷಿ ಕಾರ್ಮಿಕರು, ರೈತರು, ಕೆಲಸಗಾರರು ಸೇತುವೆ ಮೇಲೆ ಸಂಚರಿಸಿ ಗಂಗಾವತಿ, ಕಂಪ್ಲಿಗಳತ್ತ ಧಾವಿಸಿದರು. ದ್ವಿಚಕ್ರವಾಹನಗಳ ಸಂಚಾರಕ್ಕೆ ಜನತೆ ಒತ್ತಾಯಿಸುತ್ತಿದ್ದು, ತಾಲೂಕು ಆಡಳಿತ ಸಂಚಾರಕ್ಕೆ ಅನುಮತಿ ನೀಡಿಲ್ಲ.

    ಸೇತುವೆ ಎಂಟತ್ತು ದಿನಗಳ ಕಾಲ ನೀರಲ್ಲಿ ಮುಳುಗಿದ್ದು ಫಿಟ್‌ನೆಸ್ ಸರ್ಟಿಫಿಕೇಟ್ ಅಗತ್ಯವಿದೆ. ಸೇತುವೆ ಮೇಲಿನ ರಕ್ಷಣಾ ಕಂಬಿಗಳು ಅಲ್ಲಲ್ಲಿ ನೀರಿಗೆ ಕೊಚ್ಚಿ ಹೋಗಿ ರಕ್ಷಣೆ ಇಲ್ಲದಂತಾಗಿದೆ. ಆಷಾಢದ ಗಾಳಿಯೂ ಜೋರಾಗಿದ್ದು ಯಾವುದೇ ತೊಂದರೆಯಾಗಬಾರದು ಎಂದು ಸೇತುವೆ ಮೇಲಿನ ಸಂಚಾರವನ್ನು ಪ್ರತಿಬಂಧಿಸಿದೆ. ಮುರಿದು ಹೋದ ಸೇತುವೆಯ ರಕ್ಷಣಾ ಕಂಬಿಗಳನ್ನು ದುರಸ್ತಿಗೊಳಿಸುವ, ಕೆಲವಡೆ ಹೊಸದಾಗಿ ಅಳವಡಿಸಲಾಗುವುದು. ಈತನಕ ಸೇತುವೆ ಮೇಲೆ ದ್ವಿಚಕ್ರವಾಹನಗಳ ಸಂಚಾರ ನಿಷೇಧಿಸಿದೆ. ನದಿ ಪಾತ್ರದ ತಗ್ಗು ಪ್ರದೇಶಗಳ ಹೊಲ ಗದ್ದೆ ತೋಟಗಳಲ್ಲಿ ನೀರು ನುಗ್ಗಿ ಬೆಳೆನಷ್ಟಗೊಂಡ ಕುರಿತು ಕೃಷಿ ತೋಟಗಾರಿಕೆ ಅಧಿಕಾರಿಗಳ ಜಂಟಿ ಸರ್ವೇ ಆರಂಭಿಸಿದೆ ಎಂದು ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದರು.

    ಸೇತುವೆ ಮೇಲಿನ ಸಂಚಾರ ನಿಷೇಧದಿಂದಾಗಿ ಕಂಪ್ಲಿಯಿಂದ ಸೇತುವೆ ಬಳಿ ದ್ವಿಚಕ್ರವಾಹನ ನಿಲ್ಲಿಸಿದರು. ಸೇತುವೆ ಮೂಲಕ ನಡೆದು ಸಾಗಿ ಚಿಕ್ಕಜಂತಕಲ್, ನಾಗೇನಹಳ್ಳಿಯಿಂದ 20 ರೂ.ಕೊಟ್ಟು ಆಟೋ ಮೂಲಕ ಗಂಗಾವತಿಗೆ ತೆರಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts