More

    ಸಾವಯವ ಕೃಷಿಯಿಂದ ಉತ್ತಮ ಭವಿಷ್ಯ

    ಕಂಪ್ಲಿ: ಸಾವಯವ ಕೃಷಿಯಿಂದ ಮಾತ್ರ ಕೃಷಿ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗನಗೌಡ ಹೇಳಿದರು. ಇಲ್ಲಿನ ತುಂಗಶ್ವೇತಾ ಭವನದಲ್ಲಿ ಗುರುವಾರ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.

    ರಸಗೊಬ್ಬರ ಬಳಕೆಯಿಂದ ದಿನೇದಿನೆ ಕೃಷಿ ಭೂಮಿ ಬಂಜಾರಾಗುತ್ತ ಸಾಗಿದೆ. ಸಾವಯವ ಕೃಷಿ ಅಳವಡಿಸಿಕೊಳ್ಳುವಲ್ಲಿ ರೈತರು ಜಾಗೃತಿ ತೋರಬೇಕು. ಬಿಜೆಪಿ ಸರ್ಕಾರದ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಜತೆಗೆ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವಲ್ಲಿ, ಪಕ್ಷವನ್ನು ಸಂಘಟಿಸುವಲ್ಲಿ ಕಾರ್ಯಕರ್ತರು ಮುಂದಾಗಬೇಕು. ಪ್ರತಿ ಗ್ರಾಪಂಗೆ ಇಬ್ಬರಂತೆ ರೈತ ಪ್ರಹರಿಗಳನ್ನು ನೇಮಕ ಮಾಡಿದ್ದು, ರೈತರಲ್ಲಿ ಸರ್ಕಾರದ ಯೋಜನೆ, ಸಾವಯವ ಮಹತ್ವ, ಪರಿಸರ ಜಾಗೃತಿ ಮೂಡಿಸಲಿದ್ದಾರೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ್‌ಗೌಡ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ರೈತರ ಅನುಕೂಲಕ್ಕಾಗಿ ನಾನಾ ಯೋಜನೆಗಳಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕಿದೆ. ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು. ಜಿಲ್ಲೆಯ ಸಾವಯವ ಕೃಷಿಕರಾದ ಜಿ.ಶರಣಬಸವನಗೌಡ, ಜಿ.ಅಮರೇಗೌಡ, ಮದಿರೆ ಕೆಂಚಮಾಳಪ್ಪ, ಗೋನಾಳ್ ಎರ‌್ರಿಸ್ವಾಮಿ, ಮುಷ್ಟಗಟ್ಟಿ ಈರಪ್ಪರನ್ನು ಗೌರವಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ, ಕ್ಷೇತ್ರಾಧ್ಯಕ್ಷ ಅಳ್ಳಳ್ಳಿ ವೀರೇಶ್, ರೈತ ಮೋರ್ಚಾದ ಜಿಲ್ಲಾ ಪ್ರ.ಕಾರ್ಯದರ್ಶಿ ಅನಿಲ್‌ನಾಯ್ಡು, ರಾಜ್ಯ ಕಾರ್ಯಕಾರಣಿ ಸದಸ್ಯೆ ಮೀರಾಬಾಯಿ, ಪ್ರಮುಖರಾದ ಜಿ.ಶಶಿಧರಗೌಡ, ಎನ್.ಚಂದ್ರಕಾಂತರೆಡ್ಡಿ, ಎಸ್.ಪುರುಷೋತ್ತಮ, ಹೂವಣ್ಣ, ಜಿ.ಸುಧಾಕರ, ಶಂಕರರೆಡ್ಡಿ ಸೇರಿ ರೈತರು, ರೈತಮೋರ್ಚಾದ ಪದಾಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts