More

    ಮೋದಿ ಸಾಧನೆ ಜನಕ್ಕೆ ತಿಳಿಸಿ, ಕಾರ್ಯಕರ್ತರಿಗೆ ಬಿಜೆಪಿ ಕ್ಷೇತ್ರ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಸಲಹೆ

    ಕಂಪ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಎಂಟು ವರ್ಷಗಳ ಆಡಳಿತದ ಸಾಧನೆಗಳನ್ನು ಜನತೆಗೆ ತಿಳಿಸಿ ಮತಗಳನ್ನಾಗಿ ಪರಿವರ್ತಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಟೊಂಕ ಕಟ್ಟಿ ನಿಲ್ಲಬೇಕು ಎಂದು ಬಿಜೆಪಿ ಕ್ಷೇತ್ರ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಸಲಹೆ ನೀಡಿದರು.

    ಇಲ್ಲಿನ ತುಂಗಾನಿಲಯದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಲು ರಾಜ್ಯ, ಕೇಂದ್ರದ ಬಿಜೆಪಿ ಸಾಧನೆಗಳನ್ನು ಜನತೆಗೆ ತಿಳಿಸಿ ಜಾಗೃತಿ ಮೂಡಿಸಬೇಕಿದೆ. ಈ ದಿಸೆಯಲ್ಲಿ ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್‌ಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದರು.

    ಇದೇ ಸಂದರ್ಭದಲ್ಲಿ ಕೆಡಿಪಿ ಸಮಿತಿಯ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡ ಗೋನಾಳ್ ಸರಸ್ವತಿ, ರಾಮಸಾಗರದ ಜಂತಕಲ್ಲು ಪಂಪಾಪತಿ, ಮೆಟ್ರಿಯ ಎಚ್.ಶಿವಕುಮಾರ್, ಮಾವಿನಹಳ್ಳಿಯ ಎನ್.ಮುದಿಯಪ್ಪ, ಜಿರೀಗನೂರಿನ ಬಂಡಿ ಜಡೆಪ್ಪ, ಶಂಕರಸಿಂಗ್‌ಕ್ಯಾಂಪಿನ ಎಂ.ಸಿ.ರಿಯಾಜುದ್ದೀನ್, ಆರಾಧನಾ ಸಮಿತಿ ಸದಸ್ಯರಾದ ಎಮ್ಮಿಗನೂರಿನ ಪದ್ಮಾವತೆಮ್ಮ, ಕಂಪ್ಲಿಯ ಎಂ.ಭಾಸ್ಕರ್, ಎಮ್ಮಿಗನೂರಿನ ಬಜಾರ್ ವೆಂಕಟೇಶ್, ಗೆಣಿಕೆಹಾಳ್‌ನ ಎಚ್.ತಿಪ್ಪೇಸ್ವಾಮಿ ಇವರನ್ನು ಸನ್ಮಾನಿಸಲಾಯಿತು.

    ಪ್ರಮುಖರಾದ ಹೊನ್ನೂರಸಾಬ್, ಎಸ್.ಎಂ.ನಾಗರಾಜ, ಬಿ.ದೇವೇಂದ್ರ, ಆರ್.ಇಮಾಂಸಿ, ಮರೆಣ್ಣನಾಯಕ, ಸಾಮಿಲ್ ಇಸ್ಮಾಯಿಲ್, ವಿ.ವಿದ್ಯಾಧರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts