More

    ಕೋಡಿಬಿದ್ದು, ಮೈದುಂಬಿ ಹರಿಯುತ್ತಿರುವ ದರೋಜಿ ಕೆರೆ

    ಕಂಪ್ಲಿ: ಸಮೀಪದ ದರೋಜಿ ಕರೆ ಕೋಡಿ ಬಿದ್ದಿದ್ದು ಮೂರು ದಿನಗಳಿಂದ ತುಂಬಿ ಹರಿಯುತ್ತಿದೆ. ದರೋಜಿ ಸೇರಿ ಸುತ್ತಲಿನ ಗ್ರಾಮಗಳ ಜನತೆ ತಂಡೋಪತಂಡವಾಗಿ ಕೋಡಿ ಹರಿವ ವಿಹಂಗಮ ದೃಶ್ಯ ವೀಕ್ಷಿಸಲು ಸೇರುತ್ತಿದ್ದಾರೆ.

    ಈ ಭಾಗದ ಬೆಟ್ಟಗುಡ್ಡಗಳ ನೀರಿನ ಪ್ರವಾಹ, ನೀರಿನ ಬರ ನಿವಾರಣೆ, ಕೃಷಿ ಸೇರಿ ಮೀನುಗಾರಿಕೆ ಮತ್ತು ಹಸಿರು ವಲಯವನ್ನಾಗಿಸುವ ಉದ್ದೇಶದಿಂದ 1797ರಲ್ಲಿ ದರೋಜಿ ಕೆರೆ ನಿರ್ಮಿಸಲಾಗಿದೆ. 1851ರಲ್ಲಿ ದರೋಜಿ ಕೆರೆ ಒಡೆದು ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಎ.ಹ್ಯಾಥವೇ 1853ರಲ್ಲಿ ಹೊಸ ದರೋಜಿ ಗ್ರಾಮ ನಿರ್ಮಿಸಿದ್ದ. 2009ರಲ್ಲಿ ಸುರಿದ ಕುಂಭದ್ರೋಣ ಮಳೆ, ನೆರೆ ಹಾವಳಿಯಿಂದಾಗಿ ಉಂಟಾದ ಪ್ರವಾಹಕ್ಕೆ ದರೋಜಿ ಕೆರೆಯ ಕೋಡಿ ಕೊಚ್ಚಿ ಹೋಗಿತ್ತು. ವೀರಭದ್ರೇಶ್ವರ ದೇವಸ್ಥಾನ ಬಳಿಯ ಕೆರೆ ಕೋಡಿಯನ್ನು ಪುನರ್ ನಿರ್ಮಿಸಲಾಯಿತು.

    2017ರಲ್ಲಿ ಮಳೆ ಕೊರತೆಯಿಂದಾಗಿ ದರೋಜಿ ಕೆರೆ ತನ್ನ 220ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಪೂರ್ಣ ಬತ್ತಿ ಹೋಗಿ ಜಲಕ್ಷಾಮದ ಇತಿಹಾಸ ಸೃಷ್ಟಿಸಿತ್ತು. ಬರಿದಾದ ದರೋಜಿ ಕೆರೆಯಲ್ಲಿ ಗಂಗಾದೇವಿ ಮತ್ತೆ ಮೈದೆಳೆಯುವ ಸಂಕಲ್ಪದೊಂದಿಗೆ, ಚಿತ್ರದುರ್ಗದ ತಾಲೂಕಿನ ಸೊಂಡೆಕೋಳ ಗ್ರಾಮದ ತಿಪ್ಪೆಸ್ವಾಮಿ ಎನ್ನುವವರು, 2017ರ ಜುಲೈ 27ರಿಂದ 41ದಿನ ಮೌನ ಅನುಷ್ಠಾನಗೊಳಿಸಿ ಉತ್ತಮ ಮಳೆ ಸುರಿದು ಜಲಾಶಯ ಭರ್ತಿಗೊಂಡಿದ್ದು ಇತಿಹಾಸ. ಸದ್ಯ ದರೋಜಿ ಕೆರೆಗೆ ಕೋಡಿ ಬಿದ್ದಿದ್ದರಿಂದ ಜಾನುವಾರುಗಳಿಗೆ ಕುಡಿವ ನೀರು ಹಾಗೂ ಅಂತರ್ಜಲ ಪ್ರಮಾಣ ಹೆಚ್ಚಳವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts