More

    ಉತ್ತಮ ಮನಸ್ಥಿತಿ ರೂಢಿಸಿಕೊಳ್ಳುವಂತೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಮತಾ ಸಲಹೆ

    ಕಂಪ್ಲಿ: ಉತ್ತಮ ಮನಸ್ಥಿತಿ ರೂಢಿಸಿಕೊಳ್ಳಿ ಎಂದು ಜನರಿಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಮತಾ ಸಲಹೆ ನೀಡಿದರು. ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಗುರುವಾರ ಆಯೋಜಿಸಿದ್ದ ಕರ್ನಾಟಕ ಆರೋಗ್ಯ ಅಭಿಯಾನದಲ್ಲಿ ಮಾತನಾಡಿದರು. ಪೌಷ್ಟಿಕಾಂಶ ಆಹಾರದೊಡನೆ, ನಿತ್ಯ ಲಘು ವ್ಯಾಯಾಮ, ನಡಿಗೆ, ಧ್ಯಾನ, ಯೋಗಾಭ್ಯಾಸ ಅಳವಡಿಸಿಕೊಂಡಲ್ಲಿ ಕೆಲ ರೋಗಗಳಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

    ಗ್ರಾಪಂ ಸದಸ್ಯೆ ನೂರ್‌ಜಹಾನ್ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿದರು. ಮಧುಮೇಹ, ರಕ್ತದೊತ್ತಡ ಸೇರಿ ನಾನಾ 90 ರೋಗಿಗಳ ತಪಾಸಣೆ ಜರುಗಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ್, ಮುಖ್ಯಶಿಕ್ಷಕಿ, ಸುಲೋಚನಾ, ಶಿಕ್ಷಕಿಯರಾದ ಸುಧಾ, ಕೊಟ್ರೇಶ್, ಆಶಾ ಕಾರ್ಯಕರ್ತೆಯರಾದ ಅಂಬಿಕಾ, ರಾಧಿಕಾ, ಹಿಮಾಂಬಿ, ಪ್ರಮುಖರಾದ ಹೊನ್ನೂರಸಾಬ್, ರಾಜಾಸಾಬ್, ದೇವರಾಜ್, ಮಲ್ಲಿಕಾರ್ಜುನ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts