More

    ವಾಂತಿ-ಭೇದಿಗೆ ಬಾಲಕಿ ಸಾವು

    ಕಂಪ್ಲಿ: ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಗೋನಾಳ್ ಗ್ರಾಮದಲ್ಲಿ ಭಾನುವಾರದಿಂದ ವಾಂತಿ-ಭೇದಿ ಕಾಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಐದನೇ ತರಗತಿಯ ಸುಕನ್ಯಾ (11) ಸೋಮವಾರ ಮೃತಪಟ್ಟಿದ್ದಾಳೆ. ಘಟನೆ ಹಿನ್ನ್ನೆಲೆಯಲ್ಲಿ ಜಿಪಂ ಸಿಇಒ, ಜಿಲ್ಲಾ ವೈದ್ಯಾಧಿಕಾರಿಗಳ ತಂಡ, ತಹಸೀಲ್ದಾರ್, ಪಿಐ, ಪಿಡಿಒ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಭಾನುವಾರ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಗೊಂಡಿದೆ. ವಾಂತಿಭೇದಿ ತಡೆಗಟ್ಟಲು ಸೂಕ್ತ ಔಷಧಿ, ಚಿಕಿತ್ಸೆಗೆ ಅಣಿ ಮಾಡಲಾಗಿದೆ. ನೀರು ಸರಬರಾಜುಗೊಳಿಸುವ ಪೈಪು ಮತ್ತು ಟ್ಯಾಂಕ್, ನಲ್ಲಿಗಳನ್ನು ಅಧಿಕಾರಿಗಳು ಪರಿಶೀಲಿಸಿದರು.

    ಬಾಲಕಿ ಸುಕನ್ಯಾಗೆ ಭಾನುವಾರ ವಾಂತಿ-ಭೇದಿ ಕಾಣಿಸಿದ ಹಿನ್ನ್ನೆಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಸಂಜೆ ಮನೆಗೆ ಕಳುಹಿಸಲಾಗಿತ್ತು. ರಾತ್ರಿ ಮತ್ತೊಮ್ಮೆ ವಾಂತಿ-ಭೇದಿ ಕಾಣಿಸಿದ ಹಿನ್ನ್ನೆಲೆಯಲ್ಲಿ ತಾತ್ಕಾಲಿಕ ಕೇಂದ್ರಕ್ಕೆ ರಾತ್ರಿ ಬಂದು ಗುಳಿಗೆ ಪಡೆದಿದ್ದಳು. ಬೆಳಗ್ಗೆ ಮತ್ತೊಮ್ಮೆ ತಾತ್ಕಾಲಿಕ ಕೇಂದ್ರಕ್ಕೆ ಬಂದಾಗ ಕಂಪ್ಲಿಯ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳುಹಿಸಿದ್ದು, ಮಾರ್ಗ ಮಧ್ಯೆಯೇ ಸುಕನ್ಯಾ ಮೃತಪಟ್ಟಿದ್ದಾಳೆ. ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲೇ ಸುಕನ್ಯಾಳನ್ನು ದಾಖಲಿಸಿದ್ದರೆ ಸಾವು ಸಂಭವಿಸುತ್ತಿರಲಿಲ್ಲ ಎಂಬುದು ಗ್ರಾಮಸ್ಥರು ಆರೋಪವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts