More

    ನಿಯಂತ್ರಣಕ್ಕೆ ಬಂದ ವಾಂತಿ-ಭೇದಿ ಪ್ರಕರಣ

    ಕಂಪ್ಲಿ: ತಾಲೂಕಿನ ಗೋನಾಳ್ ವಾಂತಿ-ಭೇದಿ ಪ್ರಕರಣ ಮಂಗಳವಾರ ನಿಯಂತ್ರಣಕ್ಕೆ ಬಂದಿದ್ದು, ಗ್ರಾಮದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಐವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ತಾಲೂಕು ನೋಡಲ್ ಅಧಿಕಾರಿ ಡಾ.ರಾಧಿಕಾ ತಿಳಿಸಿದ್ದಾರೆ.

    ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಮಂಗಳವಾರ ಒಂಬತ್ತು ಜನ ಮೈಕೈ ನೋವಿಗಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದರು. ಡಾ.ಅರುಣ್‌ಕುಮಾರ್, ಡಾ.ಫಾರೂಕ್, ಡಾ.ರೇವಣಸಿದ್ದ ಕೋರಿ ಸಿಎಚ್‌ಒ ಹನುಮಂತಪ್ಪ ಮತ್ತು ಆರೋಗ್ಯ ಸಿಬ್ಬಂದಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ನಿಗಾವಹಿಸಿದ್ದಾರೆ. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅಬ್ದುಲ್ಲಾ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದರು. ಸಹಿಪ್ರಾ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದಿರುವುದರಿಂದ ಸೋಮವಾರದಿಂದ ಬುಧವಾರದ ವರೆಗೆ ಶಾಲೆಗೆ ರಜೆ ಘೋಷಿಸಿದೆ ಎಂದು ಮುಖ್ಯ ಶಿಕ್ಷಕ ಮಂಜುನಾಥ್ ತಿಳಿಸಿದರು.

    ತಾಪಂ ಎಡಿ ಕೆ.ಎಸ್.ಮಲ್ಲನಗೌಡ ಗೋನಾಳ್ ಗ್ರಾಮಕ್ಕೆ ಭೇಟಿ ನೀಡಿ, ಶುದ್ಧ ಕುಡಿವ ನೀರಿನ ಘಟಕ ದುರಸ್ತಿ ಕಾರ್ಯ ವೀಕ್ಷಿಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಗೋನಾಳ್ ಗ್ರಾಮದ ನೀರಿನ ಮಾದರಿಯನ್ನು ಕೆಮಿಕಲ್ ಮತ್ತು ಬಯೋಲಾಜಿಕಲ್ ಟೆಸ್ಟಿಂಗ್‌ಗಾಗಿ ಬಳ್ಳಾರಿಯ ಜಿಲ್ಲಾ ಲ್ಯಾಬ್‌ಗೆ ಕಳುಹಿಸಿದೆ. ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಹೊಲ ಗದ್ದೆಗಳಲ್ಲಿನ ಕಾಲುವೆ ನೀರನ್ನು ಸೇವಿಸಬಾರದು. ಕುದಿಸಿ ಆರಿಸಿದ ನೀರನ್ನು, ಶುದ್ಧ ಘಟಕಗಳ ನೀರನ್ನು ಸೇವಿಸುವಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಪಿಡಿಒ ಶಿಲ್ಪಾರಾಣಿ, ಪಿಐ ಸುರೇಶ್ ಎಚ್.ತಳವಾರ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೆಇ ಲೋಕೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts