More

    ಕಂಪ್ಲಿಯಲ್ಲಿ ರಸಗೊಬ್ಬರ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ; ದಾಸ್ತಾನು, ದರಪಟ್ಟಿ ಹಾಕದ ಮಾಲೀಕರಿಗೆ ನೋಟಿಸ್

    ಕಂಪ್ಲಿ: ನಿಗದಿತ ದರದಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿಲ್ಲ ಎಂಬ ರೈತರ ದೂರಿನ ಮೇರೆಗೆ ಪಟ್ಟಣದ ರಸಗೊಬ್ಬರ ಅಂಗಡಿ, ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.

    ಹೊಸಪೇಟೆಯ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಮಾತನಾಡಿ, ರಸಗೊಬ್ಬರ ಅಂಗಡಿ, ಗೋದಾಮುಗಳ ಮೇಲೆ ದಾಳಿ ಮಾಡಿದಾಗ ಪಾಯಿಂಟ್ ಆ್ ಸೇಲ್ (ಪಿಒಎಸ್)ಯಂತ್ರದಲ್ಲಿ ನಮೂದಿತ ದಾಸ್ತಾನಿಗೂ ಭೌತಿಕ ಸಂಗ್ರಹದಲ್ಲಿ ವ್ಯತ್ಯಾಸ ಕಂಡು ಬಂದಿದೆ. ರಸಗೊಬ್ಬರ ದಾಸ್ತಾನು ಮತ್ತು ದರಪಟ್ಟಿ ಪ್ರದರ್ಶಿಸಲ್ಲ. ನಾನಾ ನ್ಯೂನತೆಗಳು ಕಂಡು ಬಂದಿದ್ದು, ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

    ರೈತರಿಗೆ ರಸಗೊಬ್ಬರ ನೀಡುವಾಗ ಕಡ್ಡಾಯವಾಗಿ ಆಧಾರ್ ಸಂಖ್ಯೆ ಮತ್ತು ಭೂಮಿ ವಿವರ ಪಡೆಯುವಂತೆ ಗೊಬ್ಬರ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿ, ನಿಯಮ ಉಲ್ಲಂಘಿಸಿದಲ್ಲಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್, ಸಹಾಯಕ ಕೃಷಿ ಅಧಿಕಾರಿ ಲಕ್ಷ್ಮೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts