More

    ರೈತ ಸಂಪರ್ಕ ಕೇಂದ್ರದ ಉದ್ಘಾಟನೆ ಎದುರು ನೋಡುತ್ತಿರುವ ಸಾರ್ವಜನಿಕರು

    ಕಂಪ್ಲಿ: ಇಲ್ಲಿನ ಎಪಿಎಂಸಿ ಆವರಣದಲ್ಲಿ ವರ್ಷದ ಹಿಂದೆ ನಿರ್ಮಾಣಗೊಂಡಿದ್ದ ರೈತ ಸಂಪರ್ಕ ಕೇಂದ್ರದ ಉದ್ಘಾಟನೆಗೆ ಮತ್ತೆ ಅಡ್ಡಿ ಉಂಟಾಗಿದೆ.

    ಹೌದು, ಸೆ.7ರಂದು ಕಟ್ಟಡ ಉದ್ಘಾಟಿಸಲು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಆದರೆ, ಸಚಿವ ಉಮೇಶ್ ಕತ್ತಿ ನಿಧನದಿಂದ ಕಾರ್ಯಕ್ರಮ ಮುಂದೂಡಿದ್ದು, ರೈತರಲ್ಲಿ ನಿರಾಶೆ ಮೂಡಿಸಿದೆ. 2017-18ನೇ ಸಾಲಿನ ಕೃಷಿ ಇಲಾಖೆಯ ಆರ್‌ಐಡಿಎಫ್ 23ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ, ಹೊಸಪೇಟೆಯ ಕೆಆರ್‌ಐಡಿಎಲ್ ರೈತ ಸಂಪರ್ಕ ಕೇಂದ್ರದ ಕಟ್ಟಡ ಸಿದ್ಧಗೊಂಡಿದೆ. ಬಾಡಿಗೆ ಕಟ್ಟಡದಿಂದ ಇಲ್ಲಿಗೆ ರೈತ ಸಂಪರ್ಕ ಕೇಂದ್ರ ಸ್ಥಳಾಂತರಗೊಂಡು ಕಾರ್ಯಾರಂಭಿಸಬೇಕಿತ್ತು. ಆದರೆ, ಕಾರ್ಯಕ್ರಮ ಮುಂದೂಡಿದ್ದರಿಂದ ಮತ್ತೆ ಮಾಸಿಕ 9560 ರೂ. ಬಾಡಿಗೆ ಪಾವತಿಸುವುದು ತಪ್ಪದಾಗಿದೆ. ಈ ಶೀಘ್ರವೇ ಕಟ್ಟಡ ಉದ್ಘಾಟಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ, ನಗರ ಅಧ್ಯಕ್ಷ ಕೊಟ್ಟೂರು ರಮೇಶ್, ಪದಾಧಿಕಾರಿಗಳಾದ ಟಿ.ಗಂಗಣ್ಣ, ಆದೋನಿ ರಂಗಪ್ಪ, ಸುದರ್ಶನ, ಮುರಾರಿ ಸೇರಿ ಅನೇಕರು ಆಗ್ರಹಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಸಂಜೀವ್ ಬಿ.ಪಾಟೀಲ್, ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಉದ್ಘಾಟನೆ ಮುಂದೂಡಿದ್ದು, ವಾರದೊಳಗೆ ಉದ್ಘಾಟಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts