More

    ಪರಿಸರ ಶುದ್ಧತೆಯಲ್ಲಿ ಹೋಮಗಳ ಪಾತ್ರ ಪ್ರಮುಖ

    ಕಂಪ್ಲಿ: ಪರಿಸರ ಶುದ್ಧತೆ ಮತ್ತು ಪ್ರಶಾಂತತೆಯಲ್ಲಿ ಯಾಗ, ಹೋಮಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹಂಪಸಾಗರದ ನವಲಿ ಹಿರೇಮಠದ ಷ.ಬ್ರ.ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.

    ಸಮೀಪದ ಬುಕ್ಕಸಾಗರ ಕರಿಸಿದ್ಧೇಶ್ವರ ಸಂಸ್ಥಾನಮಠದಲ್ಲಿ ಷ.ಬ್ರ.ಲಿಂ.ಕರಿಸಿದ್ಧೇಶ್ವರ ಶ್ರೀಗಳ ಪುಣ್ಯಾರಾಧನೆ, ಷ.ಬ್ರ.ವಿಶ್ವಾರಾಧ್ಯ ಶ್ರೀಗಳ ರಜತ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಮಹಾಚಂಡಿಯಾಗಕ್ಕೆ ಚಾಲನೆ ನೀಡಿ ಮಾತನಾಡಿದರು. ಯಜ್ಞಯಾಗಾದಿಗಳ ಆಚರಣೆಯಲ್ಲಿ ವೈಜ್ಞಾನಿಕ, ವೈಚಾರಿಕ ಮಹತ್ವವಿದೆ. ಮಾನಸಿಕ-ದೈಹಿಕ ಆರೋಗ್ಯ, ಉತ್ತರೋತ್ತರ ಅಭಿವೃದ್ಧಿಗಾಗಿ ಅನನ್ಯ ಭಕ್ತಿ, ವಿಶ್ವಾಸ ಶ್ರದ್ಧೆಗಳಿಂದ ಯಾಗದಲ್ಲಿ ಪಾಲ್ಗೊಳ್ಳಬೇಕು. ಪ್ರಾಚೀನ ಪರಂಪರೆ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮನೋಭಾವನೆಗಳಿಂದ ವಿಮುಖರಾಗಬಾರದು ಎಂದು ಹೇಳಿದರು.

    ಬುಕ್ಕಸಾಗರದ ಷ.ಬ್ರ.ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಲೋಕಕಲ್ಯಾಣಾರ್ಥ 9ದಿನಗಳ ಮಹಾಚಂಡಿಯಾಗ ಹಮ್ಮಿಕೊಳ್ಳಲಾಗಿದೆ. ಸರ್ವ ಸಮುದಾಯಗಳ ಸದ್ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಹೆಬ್ಬಾಳ ಶಿವಪ್ರಕಾಶ ಶರಣರು, ಜಾಲಹಳ್ಳಿ ಮಹಾಸಂಸ್ಥಾನ ಮಠದ ನಿಯೋಜಿತ ಉತ್ತರಾಧಿಕಾರಿ ರವಿಕಿರಣ್ ದೇವರು ಸಾನ್ನಿಧ್ಯವಹಿಸಿದ್ದರು.

    ಕಂಪ್ಲಿ ಸಾಂಗತ್ರಯ ಸಂಸ್ಕೃತ ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿಗಳ ಪ್ರಧಾನ ಪೌರೋಹಿತ್ಯದಲ್ಲಿ, ಕಲ್ಯಾಣ ಚೌಕಿಮಠದ ಬಸವರಾಜಶಾಸ್ತ್ರಿ, ಹಾವಳಗಿಯ ಎಚ್.ಎಂ. ರುದ್ರಯ್ಯಶಾಸ್ತ್ರಿ, ಬೆಳಗಾವಿಯ ಎಚ್.ಎಂ. ನಾಗರಾಜಶಾಸ್ತ್ರಿ, ಶಾಬಾದಿಯ ಎಚ್.ಎಂ. ಮೃತ್ಯುಂಜಯಶಾಸ್ತ್ರಿ, ದೇವಸಮುದ್ರದ ಎಚ್.ಎಂ. ಗುರುಶಾಂತಶಾಸ್ತ್ರಿ, ಎಚ್.ಎಂ.ದೊಡ್ಡಬಸಯ್ಯಶಾಸ್ತ್ರಿ, ಎಮ್ಮಿಗನೂರಿನ ಎಚ್.ಎಂ.ದೊಡ್ಡಬಸಯ್ಯಶಾಸ್ತ್ರಿ, ವಲ್ಲಭಾಪುರದ ಓ.ಎಂ.ಸುಭಾಷ್‌ಚಂದ್ರಶಾಸ್ತ್ರಿ, ಮುದ್ದಾಪುರದ ಕೆ.ಎಂ.ಶರಭಯ್ಯಶಾಸ್ತ್ರಿ, ರಾಮಸಾಗರದ ಜೆ.ಎಂ.ಯೋಗೀಶಶಾಸ್ತ್ರಿ, ಕೆಸರಟ್ಟಿಯ ಎಚ್.ಎಂ.ಶಿವಪುತ್ರಯ್ಯಶಾಸ್ತ್ರಿ, ಜುಮ್ಮಲಾಪುರದ ಎಚ್.ಎಂ.ಶಶಿಧರಶಾಸ್ತ್ರಿ, ಕ್ಯಾದಿಗಿಹಾಳ್ ಎಚ್.ಎಂ.ಗಂಗಾಧರಸ್ವಾಮಿ, ಯಳ್ಳೂರಿನ ಎಸ್.ಆರ್.ಈರಯ್ಯಶಾಸ್ತ್ರಿಗಳು ಸಪ್ತಶತಿ ಪಾರಾಯಣ, ವೇದಮಂತ್ರಗಳನ್ನು ಪಠಿಸಿದರು. ನಾನಾ ಕಡೆಗಳಿಂದ ಸದ್ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts