More

    ಚಂಪಾ ಷಷ್ಠಿ ನಿಮಿತ್ತ ನಾಗಾರಾಧನೆ

    ಕಂಪ್ಲಿ: ಸ್ಕಂದ (ಸುಬ್ರಹ್ಮಣ್ಯ)ದೇವನ ಆರಾಧನೆಯಿಂದ ಸರ್ವ ಸಂಕಷ್ಟಗಳಿಂದ ಪಾರಾಗಬಹುದಾಗಿದ್ದು, ನಿತ್ಯ ಆರಾಧನೆಯು ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಹೇಳಿದರು.

    ಪಟ್ಟಣದ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಸುಬ್ರಹ್ಮಣ್ಯ (ಸ್ಕಂದ) ಚಂಪಾ ಷಷ್ಠಿ ಆರಾಧನೆಯ ನಿಮಿತ್ತ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಚಂಪಾ ಷಷ್ಠಿ ವೃತಾಚರಣೆಯಿಂದ ಸುಖ, ಶಾಂತಿ ಲಭಿಸುತ್ತದೆ. ಏಕಾಗ್ರತೆ, ನಂಬಿಕೆ, ವಿಶ್ವಾಸಗಳಿಂದ ಚಂಪಾಷಷ್ಠಿಯನ್ನು ಆಚರಿಸುವಂತೆ ಸದ್ಭಕ್ತರಿಗೆ ಸಲಹೆ ನೀಡಿದರು.

    ಏಳುಹೆಡೆ ನಾಗಪ್ಪನಿಗೆ ರುದ್ರಾಭಿಷೇಕ, ಶ್ರೀಸೂಕ್ತ, ಪುರುಷ ಸೂಕ್ತ, ಗಣಪತಿ ಸೂಕ್ತ, ಅಷ್ಟೋತ್ತರ ಶತನಾಮಾವಳಿ ಸೇರಿ ನಾನಾ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಚರ್ಮ, ಮನೋರೋಗ ಸೇರಿ ಸರ್ವರೋಗಗಳ ನಿವಾರಣೆಗೆ ಸಂಕಲ್ಪಿಸಿ ಸರ್ವ ಸಮುದಾಯಗಳ ಸದ್ಭಕ್ತರು ಬ್ರಹ್ಮಚಾರಿ(ವಟು)ಗೆ ವಸ್ತ್ರ, ಹಾಲು, ನಾಗಬಿಂಬವನ್ನು ದಾನಮಾಡಿದರು. ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಸುಧಾ ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts