More

    ಬನಶಂಕರಿದೇವಿಗೆ ಪೀತಾಂಬರ ಸೀರೆ ಸಮರ್ಪಣೆ ಯಾತ್ರೆ

    ಕಂಪ್ಲಿ: ಬಾದಾಮಿ ಬನಶಂಕರಿದೇವಿಗೆ ದೇವಾಂಗ ಸಮುದಾಯದಿಂದ ಪೀತಾಂಬರ ಸೀರೆ ಅರ್ಪಿಸುವ ಪದ್ಧತಿಯಿದ್ದು, ಶ್ರದ್ಧಾಭಕ್ತಿಯಿಂದ ಸೀರೆ ಅರ್ಪಿಸಲಾಗುವುದು ಎಂದು ಹಂಪೆಯ ಗಾಯತ್ರಿ ಪೀಠದ ಅಖಿಲ ಭಾರತ ದೇವಾಂಗ ಸಮುದಾಯದ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ಹೇಳಿದರು.

    ಹಂಪೆ ಗಾಯತ್ರಿ ಪೀಠದಿಂದ ಬನಶಂಕರಿ ಕ್ಷೇತ್ರಕ್ಕೆ ಪಲ್ಲಕ್ಕಿಯೊಂದಿಗೆ ಯಾತ್ರೆ ಮೂಲಕ ಬನಶಂಕರಿ ದೇವಿಗೆ ಬಾಗಿನ ಮತ್ತು ಪೀತಾಂಬರ ಸೀರೆ ಸಮರ್ಪಿಸಲು, ತಾಲೂಕಿನ ನಂ.10ಮುದ್ದಾಪುರ ಗ್ರಾಮದಿಂದ ಶುಕ್ರವಾರ ಆರಂಭಗೊಂಡ ಯಾತ್ರೆ ಇಲ್ಲಿನ ದೇವಾಂಗ ಸಮಾಜದ ಗದ್ದೆ ಚೌಡೇಶ್ವರಿ ದೇವಸ್ಥಾನ ಆವರಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದರು.

    ದೇವಾಂಗ ಸಮುದಾಯವು ದೇವ ಮಾನವರಿಗೆ ವಸ್ತ್ರ ಕೊಟ್ಟ ಸಮಾಜವಾಗಿದ್ದು, ದೇವಾಂಗದವರ ಕುಲದೇವತೆ ಬನಶಂಕರಿಗೆ ಮಡಿಯಿಂದ ನೇಯ್ದ ಸೀರೆಯನ್ನು ಪ್ರತಿ ಪುಷ್ಯ ಪೂರ್ಣಮಿಯಂದು ಸಲ್ಲಿಸುವ ಸಂಪ್ರದಾಯವಿದೆ. ಕರೊನಾ ಹಿನ್ನೆಲೆ ಪಾದಯಾತ್ರೆ ಕೈಬಿಟ್ಟು ವಾಹನ ಮೂಲಕ ತೆರಳಲಾಗುತ್ತಿದೆ. ಬನಶಂಕರಿ ದೇವಿ ದೇವಾಂಗ ಮಹಿಳಾ ಸಂಘ, ಗದ್ದೆ ಚೌಡೇಶ್ವರಿದೇವಿ ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು, ದೇವಾಂಗ ಸಮಾಜದವರು, ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts