More

    ಕಂಪ್ಲಿ ಎಪಿಎಂಸಿ ಬಳ್ಳಾರಿಗೆ ಸೇರಿಸಬೇಡಿ; ಅಕ್ಕಿ ವ್ಯಾಪಾರಸ್ಥರ ಸಂಘದ ಒತ್ತಾಯ

    ಎಪಿಎಂಸಿಯ ಡಿಇಒಗೆ ಮನವಿ

    ಕಂಪ್ಲಿ : ಇಲ್ಲಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯನ್ನು ಹೊಸಪೇಟೆಯಿಂದ ಬೇರ್ಪಡಿಸಿ ಬಳ್ಳಾರಿಯ ಎಪಿಎಂಸಿಗೆ ಸೇರಿಸಬಾರದು ಎಂದು ಕಂಪ್ಲಿ ಅಕ್ಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೇದಾರೇಶ್ವರರಾವ್ ಒತ್ತಾಯಿಸಿದ್ದಾರೆ.

    ಎಪಿಎಂಸಿಯ ಡಿಇಒ ಕೆ.ರವಿಕಾಂತ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು. ಕಂಪ್ಲಿ ಉಪ ಮಾರುಕಟ್ಟೆಯಿಂದ 1.25 ಕೋಟಿ ರೂ. ಮಾರುಕಟ್ಟೆ ಶುಲ್ಕ ವಸೂಲಾಗುತ್ತಿದೆ. ಇದು ಹೊಸಪೇಟೆ ಎಪಿಎಂಸಿ ವ್ಯಾಪ್ತಿಯಲ್ಲೇ ಹೆಚ್ಚಿನ ಪ್ರಮಾಣದ ಶುಲ್ಕವಾಗಿದೆ. 50 ಕಿ.ಮೀ.ದೂರದ ಬಳ್ಳಾರಿಗೆ ಸೇರಿಸಿದಲ್ಲಿ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಇಲ್ಲಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯನ್ನು ಸ್ವತಂತ್ರ ಮಾರುಕಟ್ಟೆಯನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.

    ಸಂಘದ ಪದಾಧಿಕಾರಿಗಳಾದ ಜೆ.ಎಸ್.ತಿಪ್ಪಯ್ಯಶ್ರೇಷ್ಠಿ, ಪ್ರಮುಖರಾದ ಪಿ.ನಾಗೇಶ್ವರರಾವ್, ಗೌತಮ್ ರಾಂಕ್, ಬಿ.ನಾರಾಯಣ, ಪಿ.ಪ್ರವೀಣ್, ಜಿ.ಎನ್.ನರಸಿಂಹ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts