More

    ಆಡಳಿತದಲ್ಲಿರಲಿ ಕನ್ನಡ ಭಾಷಾ ಬಳಕೆ, ತಹಸೀಲ್ದಾರ್ ಗೌಸಿಯಾಬೇಗಂ

    ಕಂಪ್ಲಿ: ಅಧಿಕಾರಿಗಳು ಆಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆಗೆ ಆಧ್ಯತೆ ನೀಡಬೇಕು ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು. ತಾಲೂಕು ಆಡಳಿತ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ಪೋಷಣೆಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು. ತಾಪಂ ಇಒ ಮೊಹಮ್ಮದ್ ಖಿಜರ್ ಮಾತನಾಡಿ, ಕನ್ನಡ ಭಾಷೆಯ ಸಾಹಿತ್ಯ, ಸಂಸ್ಕೃತಿಯನ್ನು ಶಿಕ್ಷಣ ಹೊರತಾಗಿಯೂ ಅಧ್ಯಯನ ಮಾಡುವಲ್ಲಿ ಯುವಜನತೆ ಸ್ವಯಂಪ್ರೇರಣೆಯಿಂದ ಮುಂದಾಗಬೇಕು ಎಂದರು.

    ಐತಿಹಾಸಿಕ ಸೋಮಪ್ಪ ಕೆರೆಯ ಸಭಾಂಗಣದಿಂದ ಭುವನೇಶ್ವರಿ ಮೆರವಣಿಗೆ ಆರಂಭಗೊಂಡಿತು. ಕಂಪ್ಲಿಯ ವಿಜಯನಗರ ಜನಪದ ಚಿತ್ರಕಲಾವಿದೆ ಸುಮಿತ್ರಮ್ಮ ಚಿತ್ರಗಾರ ಪರಶುರಾಮಪ್ಪ ಅಲಂಕರಿಸಿದ ಭುವನೇಶ್ವರಿ ಮೆರವಣಿಗೆಯಲ್ಲಿ ಹೇರೂರು ವಿರುಪಣ್ಣ ತಾತನ ಭಜನಾವೃಂದ, ಆದಿವಾಸಿ ಬುಡಕಟ್ಟು ಹಕ್ಕಿಪಿಕ್ಕಿ ಜನಪದ ಮಹಿಳಾ ನೃತ್ಯ ಕಲಾವಿದರು, ಕಹಳೆವಾದಕರು, ಹಗಲುವೇಷದಾರರು, ಛದ್ಮವೇಷದಾರಿ ಮಕ್ಕಳು, ಶಾಲೆ ಮಕ್ಕಳು, ಕೃಷಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸ್ತಬ್ಧ ಚಿತ್ರಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದಿದ್ದರು. ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾವಿದರನ್ನು ಗೌರವಿಸಲಾಯಿತು.

    ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಉಪಾಧ್ಯಕ್ಷೆ ನಿರ್ಮಲಾ ಕೆ.ವಸಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಹನುಮಂತ ಮತ್ತು ಸದಸ್ಯರು, ಪುರಸಭೆ ಸಿಒ ಡಾ.ಎನ್.ಶಿವಲಿಂಗಪ್ಪ, ತಾಪಂ ಎಡಿ ಕೆ.ಎಸ್.ಮಲ್ಲನಗೌಡ, ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಎಸ್.ಜಿ.ಚಿತ್ರಗಾರ್, ಪ್ರಮುಖರಾದ ಕರೇಕಲ್ ಮನೋಹರ, ಸಂತೋಷ್ ಸೋಗಿ, ಅಂಬಿಗರ ಮಂಜುನಾಥ, ಮಾರೇಶ್, ಬಡಿಗೇರ ಜಿಲಾನ್‌ಸಾಬ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts