More

    2022ರೊಳಗೆ ರಾಮ ಮಂದಿರ ನಿರ್ಮಾಣ, ಫೆ.19ರಂದು ನವದೆಹಲಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್​ನ ಮೊದಲ ಸಭೆ

    ನವದೆಹಲಿ: ಇನ್ನು ಎರಡು ವರ್ಷ, 2022ರೊಳಗೆ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಕಾಮೇಶ್ವರ ಚೌಪಾಲ್​​ ಹೇಳಿದ್ದಾರೆ.

    ಪ್ರಯಾಗ್​ರಾಜ್‌ನಲ್ಲಿ ಫೆಬ್ರವರಿ 19 ರಂದು ನಡೆಯಬೇಕಿದ್ದ ದೇವಾಲಯದ ಸದಸ್ಯರ ಮೊದಲ ಸಭೆಯನ್ನು ನವದೆಹಲಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲ ಸದಸ್ಯರು ಫೆಬ್ರವರಿ 18ರಂದು ದೆಹಲಿಯಲ್ಲಿ ಹಾಜರಿರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

    ಸಭೆಯಲ್ಲಿ ರಾಮ ಮಂದಿರ ನಿರ್ಮಾಣದ ಅಡಿಗಲ್ಲು ಹಾಕಲು ದಿನಾಂಕವನ್ನು ನಿಶ್ಚಯಿಸಲಾಗುತ್ತದೆ. ಅಲ್ಲಿಂದ ದೇವಾಲಯದ ನಿರ್ಮಾಣ ಕಾರ್ಯ ಆರಂಭವಾಗುತ್ತದೆ ಎಂದರು.

    ಅಂದಾಜು 57 ಎಕರೆ ಜಮೀನನ್ನು ಸಮತಟ್ಟುಗೊಳಿಸುವ ಕಾರ್ಯ ನಡೆಯುವುದು. ನಂತರ ಅಡಿಗಲ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಡಿಗಲ್ಲು ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು. ಈಗ ನಿಗದಿ ಪಡಿಸಿರುವ 67 ಎಕರೆ ಭೂಮಿ ಸಾಕಾಗುವುದಿಲ್ಲ. ಇನ್ನು ಒಂದಷ್ಟು ಜಮೀನಿನ ಅವಶ್ಯಕತೆ ಇದೆ ಎಂದು ಚೌಪಾಲ್​ ಅಭಿಪ್ರಾಯಪಟ್ಟರು.

    ಸಂಸತ್​ನಲ್ಲಿ ಫೆಬ್ರವರಿ 5ರಂದು ಪ್ರಧಾನಿ ಮೋದಿ ಅವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ರಚನೆ ಬಗ್ಗೆ ಘೋಷಿಸಿದ್ದರು. ಅದರಂತೆ ಟ್ರಸ್ಟ್​ ಘೋಷಣೆಯಾಗಿದೆ. ಇದೇ ಟ್ರಸ್ಟ್​ ರಾಮ ಮಂದಿರ ನಿರ್ಮಾಣದ ರೂಪುರೇಷೆಗಳನ್ನು ಅಂತಿಮಗೊಳಿಸಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts