More

    ಮಂಡ್ಯ ರೈತನಿಗೆ ಪ್ರಧಾನಿ ಮೋದಿ ಶ್ಲಾಘನೆ

    ಮಂಡ್ಯ: ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಕರ್ನಾಟಕ ರೈತರೊಬ್ಬರನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಪ್ರಧಾನಿ ಅವರಿಂದ ಮೆಚ್ಚುಗೆ ಪಡೆದ ಆ ವ್ಯಕ್ತಿಯೇ ಮಂಡ್ಯದ ಗಂಡು.

    ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರು ಸ್ವಂತ ಹಣದಲ್ಲಿ 16 ಕೆರೆಗಳನ್ನು ನಿರ್ಮಿಸಿದ್ದಾರೆ. ಇವರ ಸಮಾಜಮುಖಿ ಕಾರ್ಯದ ಬಗ್ಗೆ ಇಂದು (ಭಾನುವಾರ) ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಮೋದಿ, ಸಾಮಾನ್ಯ ರೈತರಾಗಿರುವ ಕಾಮೇಗೌಡರ ಕಾರ್ಯ ಅಸಾಧಾರಣವಾದದ್ದು. 85 ವರ್ಷ ವಯಸ್ಸಿನ ಅವರು 16 ಕೆರೆಗಳನ್ನು ನಿಮಿರ್ಸುವ ಮೂಲಕ ಜಲಸಂರಕ್ಷಣೆ ಮಾಡಿದ್ದಾರೆ. ನೀರಿನ ಸಮಸ್ಯೆ ನೀಗಿಸಿದ್ದಾರೆ. ಅವರ ಪರಿಶ್ರಮ ದೊಡ್ಡದು ಎಂದು ಪ್ರಶಂಸಿಸಿದರು. ಇದನ್ನೂ ಓದಿರಿ ಬೆಂಗಳೂರಿಗಾಗಿ ಸಚಿವರಿಬ್ಬರ ಮುಸುಕಿನ ಗುದ್ದಾಟ? ತಲ್ಲಣ ಮೂಡಿಸಿದೆ ಸುಧಾಕರ್​ರ ‘ಸಂಡೇ ಥಾಟ್ಸ್​’

    ಕಾಮೇಗೌಡ ಅವರು ಕುಂದೂರು ಬೆಟ್ಟದ ತಪ್ಪಲಿನಲ್ಲಿ ಕೆರೆಗಳನ್ನು ನಿರ್ಮಿಸಿ ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಕುಡಿವ ನೀರೊದಗಿಸಿದ್ದಾರೆ. ಅಂತರ್ಜಲ ವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಗಿಡ ನೆಟ್ಟು ಪರಿಸರ ಕಾಳಜಿ ಮೆರೆದಿದ್ದಾರೆ. ಹಾಗಾಗಿ ಬೆಟ್ಟದ ತಪ್ಪಲು ಹಚ್ಚಹಸಿರಾಗಿದೆ.

    ಮಂಡ್ಯ ರೈತನಿಗೆ ಪ್ರಧಾನಿ ಮೋದಿ ಶ್ಲಾಘನೆಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿರುವ ಇವರ ಸೇವೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ. ಇದೀಗ ಸ್ವತಃ ಪ್ರಧಾನಿ ಅವರಿಂದ ಪ್ರಶಂಸೆ ಪಡೆದಿರುವುದು ಸಕ್ಕರೆ ನಾಡಿಗೆ ಮತ್ತೊಂದು ಗರಿಮೆ ಬಂದಂತಾಗಿದೆ.

    ನಾನು ಇರುವೆ ಇದ್ದಂತೆ. ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಗುರುತಿಸಿರುವುದು ತುಂಬಾ ಖುಷಿಯಾಗಿದೆ. ಇದ ಮೋದಿ ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ ಎಂದು ಸಂತಸ ಹಂಚಿಕೊಂಡಿರುವ ಕಾಮೇಗೌಡ, ನನಗೆ 38 ಗುಂಟೆ ಜಮೀನಿದೆ. ಜೀವನ ನಡೆಸಲು ಕಷ್ಟ. ಸರ್ಕಾರ ನೆರವು ನೀಡಿದರೆ ಸಾಯುವವರೆಗೂ ಪರಿಸರ ಸೇವೆ ಮಾಡುತ್ತೇನೆ. ಜೀವನ ಮಾಡೋದಕ್ಕೆ ನೆರವು ಕೇಳುತ್ತಿಲ್ಲ. ಕೆರೆ, ಕಟ್ಟೆ ಸೇವೆ ಮಾಡಲು ನೆರವು ಕೇಳ್ತಿದ್ದೀನಿ. ಕೆರೆ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಿದ್ರೆ ಹಸಿದವರಿಗೆ ಅನ್ನ ನೀಡಿದಷ್ಟೇ ಖುಷಿಯಾಗುತ್ತೆ ಎಂದು ಮನವಿ ಮಾಡಿದ್ದಾರೆ.

    ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts