More

    ಕಂಬಳ ಕರೆಯಲ್ಲಿ ಪುಟ್ಟ ಬಾಲಕಿ!

    ಬೆಳ್ಮಣ್: ಇತ್ತೀಚೆಗೆ ಕಾರ್ಕಳದ ಮಿಯ್ಯರಿನಲ್ಲಿ ನಡೆದ ಲವ-ಕುಶ ಜೋಡುಕರೆ ಕಂಬಳದಲ್ಲಿ ಪುಟ್ಟ ಬಾಲಕಿ ಕೋಣಗಳೊಂದಿಗೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ.
    ಕುಂದಾಪುರದ ಕೃಷಿ ಕುಟುಂಬದ ಬೊಳ್ಳಂಪಳ್ಳಿ ಪರಮೇಶ್ವರ್ ಭಟ್ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯ ಮಗಳು ಚೈತ್ರಾ. ಎಳೆಯ ವಯಸ್ಸಿನಲ್ಲೇ ಜಾನುವಾರುಗಳ ಬಗ್ಗೆ ಅತೀವ ಪ್ರೀತಿ ಹೊಂದಿರುವ ಈಕೆ ಪ್ರತಿನಿತ್ಯ ಕೋಣಗಳನ್ನು ಸ್ನಾನ ಮಾಡಿಸುವುದು, ಅವುಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಳು. ಕಂಬಳ ಕೋಣಗಳ ಮೇಲಿನ ಪ್ರೀತಿಯಿಂದ ಮಿಯ್ಯರು ಕಂಬಳದಲ್ಲಿ ಬಾಲಕಿ ಕೋಣಗಳ ಜತೆ ಕಾಣಿಸಿಕೊಂಡಿರುವುದು ಕಂಬಳ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

    ಬೊಳ್ಳಂಪಳ್ಳಿ ಗ್ರಾಮದ ಕಾಲ್ತೊಡು ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಚೈತ್ರಾಗೆ ಬಾಲ್ಯದಿಂದಲೂ ಕಂಬಳ ಬಗ್ಗೆ ವಿಶೇಷ ಆಸಕ್ತಿ. ಇದರಿಂದಲೇ ಈಕೆ ಕಂಬಳದ ಕರೆಗೂ ಇಳಿಯುವಂತಾಗಿದೆ. ತಂದೆ ಪರಮೇಶ್ವರ ಭಟ್ 25 ವರ್ಷಗಳಿಂದ ಕೃಷಿ ಬದುಕಿನ ಜತೆ ಕಂಬಳದ ಕೋಣಗಳನ್ನು ಸಾಕುತ್ತಿದ್ದಾರೆ. ಈ ಬಾರಿ ಮಿಯ್ಯರು ಕಂಬಳದಲ್ಲಿ ಚೈತ್ರಾ ಯಜಮಾನಿಕೆಯಲ್ಲೇ ಅವರ ಕೋಣಗಳನ್ನು ಓಡಿಸಲಾಗಿದೆ.

    ಕಂಬಳದಲ್ಲಿ ಭಾಗವಹಿಸುವುದೆಂದರೆ ತುಂಬ ಖುಷಿ ನೀಡುತ್ತದೆ. ಕಂಬಳದ ಬಗ್ಗೆ ವಿಶೇಷ ಆಸಕ್ತಿಯಿದೆ. ಮುಂದೆ ಕಂಬಳ ಓಟಗಾರ್ತಿಯಾಗಬೇಕೆಂಬ ಕನಸೂ ಇದೆ.
    ಚೈತ್ರಾ ಭಟ್, ಕಂಬಳ ಆಸಕ್ತ ಬಾಲಕಿ

    ಚೈತ್ರಾ ಭಟ್ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಂಬಳ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಅಕಾಡೆಮಿ ಮೂಲಕ ತರಬೇತಿಗೆ ನಾವು ಬದ್ದರಾಗಿದ್ದೇವೆ.
    ಗುಣಪಾಲ ಕಡಂಬ, ಸಂಚಾಲಕರು, ಕಂಬಳ ಸಂರಕ್ಷಣೆ ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts