More

    ವಂಡಾರು ಕಂಬಳೋತ್ಸವಕ್ಕೆ ಜನಸಾಗರ

    ವಿಜಯವಾಣಿ ಸುದ್ದಿಜಾಲ ಗೋಳಿಯಂಗಡಿ

    ಇತಿಹಾಸ ಪ್ರಸಿದ್ಧ ವಂಡಾರು ಕ್ಷೇತ್ರದ ತುಳಸಿಯಮ್ಮ, ನಿಗಳೇಶ್ವರ ಸನ್ನಿಧಿಯಲ್ಲಿ ಧಾರ್ಮಿಕ ಆಚರಣೆಯ ಕಂಬಳೋತ್ಸವಕ್ಕೆ ಚಾಲನೆ ನೀಡಲಾಯಿತು.

    ಬೆಳಗ್ಗೆ ಕಂಬಳಗದ್ದೆಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಮಹೂರ್ತ ಹಾಗೂ ಸುತ್ತಕ್ಕಿ ಹರಕೆ, ಕಂಬಳದ ಪ್ರಯುಕ್ತ ಹರಕೆ ಸೇವೆ, ಶ್ರೀಕ್ಷೇತ್ರದ ನಿಗಳೇಶ್ವರ ಹಾಗೂ ತುಳಸಿ ಅಮ್ಮನವರ ಸನ್ನಿಧಿಯಲ್ಲಿ ಹಣ್ಣುಕಾಯಿ ಸೇವೆ, ಪಟ್ಟದ ಹೆಗ್ಗಡೆಯವರ ಸನ್ನಿಧಿಯಲ್ಲಿ ಹೋಮ, ಪಟ್ಟದ ಕೋಣಗಳ ಕಂಬಳೋತ್ಸವ ನಡೆಯಿತು.

    ಇಲ್ಲಿನ ಕಂಬಳದಲ್ಲಿ ಕೋಣಗಳಿಗೆ ಸ್ಪರ್ಧೆಗೆ ಅವಕಾಶವಿಲ್ಲ. ಕೋಣಗಳು ಓಟಕ್ಕೆ ಮಾತ್ರ ಸಿಮೀತವಾಗಿರದೆ ವಂಡಾರು ಕ್ಷೇತ್ರದ ಜಾತ್ರೆಯಾಗಿ ಆಚರಿಸಲಾಗುತ್ತಿದೆ. ಇಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಾಂಪ್ರದಾಯದಂತೆ ಜಾನುವಾರುಗಳಿಗೆ ಆನಾರೋಗ್ಯ ಮೊದಲಾದ ಸಂದರ್ಭಗಳಲ್ಲಿ ಹರಕೆ ಹೊತ್ತವರು ತಮ್ಮ ನುನುವಾರುಗಳನ್ನು ಕಂಬಳಗದ್ದೆಗೆ ಸುತ್ತು ಹಾಕಿಸಿ ಹರಕೆ ತೀರಿಸಿದರು. ಜಾನುವಾರುಗಳ ಜತೆಗೆ ಜನರು ಕೂಡ ಗದ್ದೆಗಿಳಿದು ಹರಕೆ ಸಲ್ಲಿಸಿದರು. ವಂಡಾರು ಕ್ಷೇತ್ರದ ಧರ್ಮದರ್ಶಿ ವಿ.ಪ್ರವೀಣ ಹೆಗ್ಡೆ ನೇತೃತ್ವದಲ್ಲಿ ಕಂಬಳೋತ್ಸವದಲ್ಲಿ ಊರ ಪರವೂರ ಮತ್ತು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತಾದಿಗಳು, ಕಂಬಳ ಅಭಿಮಾನಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts