More

    ಕಮಲಾಪುರ: ಲೋಡ್ ಶೆಡ್ಡಿಂಗ್ ನಿಲ್ಲಿಸಿ, ಟಿಸಿಗಳನ್ನು ಸರಿಪಡಿಸಿ

    ಕಮಲಾಪುರ: ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕೆಟ್ಟು ಹೋದ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿ ಮಾಡಬೇಕು ಹಾಗೂ 100 ಕೆವಿ ಸಾಮರ್ಥ್ಯದ ಟಿಸಿಗಳನ್ನು ಅಳವಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿAದ ಜೆಸ್ಕಾಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತಾಪಿ ವರ್ಗ ಕೆಂಗೆಟ್ಟಿದ್ದು, ನೀರಿಲ್ಲದೆ ಪರದಾಡುವಂತಾಗಿದೆ. ಇನ್ನು ನೀರಾವರಿ ರೈತರು ಜಮೀನಿಗೆ ನೀರು ಹರಿಸಬೇಕು ಎಂದರೆ ನಿಗದಿತ ಸಮಯಕ್ಕೆ ವಿದ್ಯುತ್ ದೊರಕುತ್ತಿಲ್ಲ. ಇನ್ನೊಂದೆಡೆ ಟಿಸಿ ಸುಟ್ಟರೂ ದುರಸ್ತಿ ಮಾಡುವವರು ಇಲ್ಲದಂತಾಗಿದೆ. ಈರುಳ್ಳಿ, ಮೆಣಸಿನಕಾಯಿ, ಬದನೆ ಸೇರಿ ಇನ್ನಿತರ ತೋಟಗಾರಿಕೆ ಬೆಳೆಗಳು ಹಾಳಾಗುತ್ತಿವೆ ಎಂದು ಅಳಲು ತೋಡಿಕೊಂಡರು.

    ಜೆಸ್ಕಾA ಜೆಇ ಪ್ರವೀಣ ಪಾಟೀಲ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ವಿರೂಪಾP್ಷÀಪ್ಪ ತಡಕಲ್, ಈರಣ್ಣ ಏರಿ, ದಿಲೀಪಕುಮಾರ, ಮಲ್ಕಜಪ್ಪ ಪಾಟೀಲï, ಅಶೋಕ ಗುತ್ತೇದಾರ್, ಪರಮೇಶ್ವರ ದಾಕಲಿ, ಶರಣಪ್ಪ ಹರಸೂರ, ಖಾಸೀಂ, ರವೂಫ್, ಮುಕ್ತಾರ್, ಶಿವಲಿಂಗಪ್ಪ, ಮಲ್ಲಣ್ಣ, ಹಣಮಂತ, ಪ್ರಕಾಶ, ನಾಗರಾಜ, ಶಿವಪುತ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts