More

    ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇಜರ್​ ಸರ್ಜರಿ: 1817 ಅಧಿಕಾರಿ, ಸಿಬ್ಬಂದಿ ಎತ್ತಂಗಡಿ, ಕೆಲವರಿಗೆ ಬಡ್ತಿ ಭಾಗ್ಯ

    ಬೆಂಗಳೂರು: ಪೊಲೀಸ್​ ಸೇವೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇಜರ್​ ಸರ್ಜರಿ ಮಾಡಲಾಗಿದ್ದು, ಹಲವಾರು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಪೊಲೀಸ್​ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ಒಟ್ಟು 1817 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. 127 ಪಿಎಸ್‌ಐ, 130 ಎಎಸ್‌ಐ, 999 ಹೆಡ್​ಕಾನ್ಸ್‌ಟೆಬಲ್ ಮತ್ತು 561 ಕಾನ್ಸ್‌ಟೆಬಲ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್​ ಆಯುಕ್ತ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.

    ಒಂದೇ ಠಾಣೆ, ಉಪ ವಿಭಾಗಗಳಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅದರಲ್ಲೂ ಪ್ರಮುಖವಾಗಿ ಕಾನ್ಸ್‌ಟೆಬಲ್ ಹಾಗೂ ಹೆಡ್ ಕಾನ್ಸ್‌ಟೆಬಲ್‌ಗಳನ್ನು ಬೇರೆಡೆ ವರ್ಗಾಯಿಸಲಾಗಿದೆ. ಈ ಮೊದಲು ವರ್ಗಾವಣೆ ಆಗಿದ್ರೂ ಒಒಡಿ ಮೇಲೆ ಮತ್ತೆ ಅದೇ ಕಡೆ ಕೆಲಸ ಮಾಡ್ತಿದ್ದರು. ಠಾಣಾ ಸರಹದ್ದಿನಲ್ಲಿ ಅಧಿಕಾರಿ, ಸಿಬ್ಬಂದಿ ಹಿಡಿತ ಸಾಧಿಸುತ್ತಿದ್ದ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿದ್ದ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿದ್ದಾರೆ.

    ವರ್ಗಾವಣೆ ಜೊತೆಗೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರೊಮೋಷನ್ ಭಾಗ್ಯವೂ ಸಿಕ್ಕಿದೆ. 126 ಮಂದಿ ಎಎಸ್‌ಐಗಳಿಗೆ ಪಿಎಸ್‌ಐ ಹುದ್ದೆಗೆ ಪ್ರೊಮೋಷನ್ ದೊರಕಿದೆ. 10 ರಿಸರ್ವ್ ಎಎಸ್‌ಐಗಳಿಗೆ ರಿಸರ್ವ್ ಪಿಎಸ್‌ಐ ಹುದ್ದೆಗೆ ಪ್ರೊಮೋಷನ್ ಆಗಿದೆ. 281 ಹೆಡ್ ಕಾನ್ಸ್‌ಟೆಬಲ್‌ಗಳಿಗೆ ಎಎಸ್‌ಐ ಹುದ್ದೆಗೆ ಹಾಗೂ 436 ಕಾನ್ಸ್‌ಟೆಬಲ್‌ಗಳಿಗೆ ಹೆಡ್‌ ಕಾನ್ಸ್‌ಟೆಬಲ್ ಹುದ್ದೆಗೆ ಪ್ರೊಮೋಷನ್ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಫುಲ್​ ಟೈಟ್​ ಆಗಿ ರಸ್ತೆಯಲ್ಲೇ ಹೊರಳಾಟ! ಆ ಕಡೆ ಸರಿಯಮ್ಮಾ ಅಂದ್ರು ಜಗ್ಗದ ಯುವತಿ, ವಿಡಿಯೋ ವೈರಲ್​

    ಸಿಎಂ ಬೊಮ್ಮಾಯಿ ವಿರುದ್ಧ ಭವಿಷ್ಯ ನುಡಿದ ಮೈಲಾರಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿಗೆ ಎದುರಾಯ್ತು ಸಂಕಷ್ಟ!

    ಉಷ್ಣವಲಯದ ಜಿರಳೆ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಚಲಿಸುವ ಜೀವಿಯೇ? ಫ್ಯಾಕ್ಟ್​ಚೆಕ್​ನಲ್ಲಿ ತಿಳಿದುಬಂದಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts