More

    ಕಕ ಪರಿವಾರ ಮಿಲನದಲ್ಲಿ ೫೦ ಸಾವಿರ ಜನ ಭಾಗಿ

    ಕಮಲನಗರ: ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸ್ವರ್ಣ ಜಯಂತ್ಯುತ್ಸವ ನಿಮಿತ್ತ ಡಿ.೩ರಂದು ಬಸವಕಲ್ಯಾಣದಲ್ಲಿ ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ೫೦ ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.

    ಪಟ್ಟಣದ ಶರಣಬಸಪ್ಪ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಕರೆದಿದ್ದ ತಾಲೂಕು ವಿಕಾಸ ಅಕಾಡೆಮಿ ಬಳಗದ ಸಭೆಯಲ್ಲಿ ಮಾತನಾಡಿದ ಅವರು, ೧೯೭೪ರಲ್ಲಿ ವಸಂತ ಪಂಚಮಿ ದಿನ ಜನ್ಮತಳೆದ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಾಮಾಜಿಕ ಕಳಕಳಿ ಮೂಲಕ ಅನ್ಯ ಸಂಸ್ಥೆಗಳಿಗಿAತ ಭಿನ್ನವಾಗಿದೆ. ತನ್ನೊಂದಿಗೆ ಇಡೀ ಕಲ್ಯಾಣ ಕರ್ನಾಟಕದ ಏಳಿಗೆ ಬಯಸಿ ವಿವಿಧ ಕ್ಷೇತ್ರಗಳ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ ಎಂದರು.

    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ದೇಶದ ಸಮಗ್ರ ಪ್ರಗತಿಗೆ ಹಗಲಿರುಳು ಶ್ರಮಿಸುತ್ತಿರುವ ವಿಕಾಸ ಅಕಾಡಮಿ ಕಾರ್ಯವನ್ನು ಶ್ಲಾಘಿಸಿದರು.

    ಮುಖ್ಯ ಗುರು ಶರಣಪ್ಪ ಮಾನಕರಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಮರಾವ ತೇಗಂಪುರೆ, ಪ್ರಮುಖರಾದ ಬಸವರಾಜ ಎಂ.ಪಾಟೀಲ್, ಶಿವಾನಂದ ವಡ್ಡೆ, ಶಿವಕುಮಾರ ಭಾಲ್ಕೆ, ಉದಯ ಮಾನಕರಿ, ಕಂಟೆಪ್ಪ ಭವರಾ, ರಾಜಕುಮಾರ ವಡಗಾವೆ ಇತರರಿದ್ದರು.

    ವಿಕಾಸ ಅಕಾಡಮಿ ತಾಲೂಕು ಸಂಚಾಲಕ ಯಶವಂತ ಬಿರಾದಾರ ಸ್ವಾಗತಿಸಿದರು. ನಾಗರಾಜ ಬಿರಾದಾರ ನಿರೂಪಣೆ ಮಾಡಿದರು.

    ೨೦೨೫ರಲ್ಲಿ ಭಾರತೀಯ ಸಂಸ್ಕೃತಿ ಉತ್ಸವ-೭, ಸ್ವರ್ಣ ಜಯಂತಿ ಹಬ್ಬ ೨೪೦ ಎಕರೆ ಪ್ರದೇಶದಲ್ಲಿ ೧೦ ದಿನ ಅದ್ದೂರಿಯಾಗಿ ನಡೆಯಲಿದ್ದು, ೩೦ ಲಕ್ಷ ಜನರು ಸಾಕ್ಷಿಯಾಗಲಿದ್ದಾರೆ. ಈ ಎಲ್ಲದರ ಪೂರ್ವಭಾವಿಯಾಗಿ ಬೆಂಗಳೂರು ಮತ್ತಿತರ ಕಡೆ ಹಲವಾರು ಕಾರ್ಯಕ್ರಮ, ಸಭೆಗಳು ಜರುಗುತ್ತಿವೆ. ನಾವೆಲ್ಲರೂ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಡಾ.ಬಸವರಾಜ ಪಾಟೀಲ್ ಸೇಡಂ ಕನಸು ನನಸಾಗಿಸೋಣ.
    | ರೇವಣಸಿದ್ದಪ್ಪ ಜಲಾದೆ ವಿಕಾಸ ಅಕಾಡಮಿ ಜಿಲ್ಲಾ ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts