More

    VIDEO| ಕರೊನಾ ವೈರಸ್​ ಭೀತಿಯಿಂದ ಮನೆಯಲ್ಲೇ ಉಳಿದಿರುವವರಿಗೆ ಒಂದಿಷ್ಟು ಟಿಪ್ಸ್​ ನೀಡಿದ ಕಮಲ್​ ಹಾಸನ್!​

    ಚೆನ್ನೈ: ಕರೊನಾ ವೈರಸ್​ ಭೀತಿಗೆ ಇಡೀ ದೇಶವೇ ಸ್ತಬ್ಧವಾಗಿರುವ ಸಮಯದಲ್ಲಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈಹಾಕಿದ್ದು, ಅದರಂತೆಯೇ ನಟ ಹಾಗೂ ರಾಜಕಾರಣಿ ಕಮಲ್​ ಹಾಸನ್​ ಈ ಸಂದರ್ಭದಲ್ಲಿ ಕೆಲವೊಂದಿಷ್ಟು ಉಪಯುಕ್ತ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

    ತಮ್ಮ ಟ್ವಿಟರ್​ ಪೇಜ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಕಮಲ್​, ಮನೆಯಲ್ಲೇ ಉಳಿಯುವುದರ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ದಯವಿಟ್ಟು ಎಲ್ಲರೂ ಮನೆಯಲ್ಲೇ ಉಳಿಯಿರಿ. ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಬನ್ನಿ. ಆದಷ್ಟು ಏಕಾಂತವಾಗಿ ಕಳೆಯುವುದರೊಂದಿಗೆ ಕರೊನಾ ವೈರಸ್​ ಹರಡುವುದನ್ನು ತಡೆಗಟ್ಟಬಹುದು ಎಂದಿದ್ದಾರೆ.

    ಮಾತು ಮುಂದುವರಿಸಿದ ಕಮಲ್, ನಿಮ್ಮಲ್ಲಿ ಪಾಸಿಟಿವ್​ ಕರೊನಾ ವೈರಸ್​ ಕಂಡುಬಂದರೆ, ಮರಣ ಬಂದೇ ಬರುತ್ತದೆ ಎಂದರ್ಥವಲ್ಲ. ಯಾರಿಗೆ ಪ್ರತಿರೋಧಕ ವ್ಯವಸ್ಥೆ ಕುಗ್ಗಿರುತ್ತದೋ ಅವರಿಗೆ ತುಸು ಗಂಭೀರ ಪರಿಣಾಮ ಬೀರಲಿದೆ. ಆದರೆ, ಯಾರೂ ಹೆದರುವ ಅವಶ್ಯಕತೆ ಇಲ್ಲ. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಉಳಿಯಿರಿ. ಆದಷ್ಟು ಈ ಅವಕಾಶವನ್ನು ಬಳಸಿಕೊಂಡು ಮನೆಯವರೊಂದಿಗೆ ಸಮಯ ಕಳೆಯಿರಿ. ಪ್ರೀತಿ ಪಾತ್ರರೊಂದಿಗೆ ಫೋನ್​ ಮೂಲಕ ಮಾತನಾಡಿ. ಆದರೆ, ಹೊರಗಡೆ ಭೇಟಿಯಾಗೋಣ ಎಂದವರಿಗೆ ನೋ ಎಂದು ಹೇಳಿ. ವೈರಸ್​ ನಮಗೆ ಬರುವುದೇ ಇಲ್ಲವೆಂಬ ಅತಿಯಾದ ನಂಬಿಕೆ ಬೇಡ. ನಾವು ವೈರಸ್​ ಅನ್ನು ರವಾನಿಸುವ ವಸ್ತುವಾಗಬಾರದೆಂದು ಸಲಹೆ ನೀಡಿದರು.

    ಮತ್ತೊಂದು ವಿಡಿಯೋದಲ್ಲಿ ವಿರಾಮ ಅವಕಾಶ ಕಳೆಯಲು ಟಿಪ್ಸ್​ ನೀಡಿರುವ ಕಮಲ್​ ಹಾಸನ್​, ಮನೆಯಲ್ಲಿಯೇ ಸಿನಿಮಾ ವೀಕ್ಷಿಸಿ. ಪುಸ್ತಕವನ್ನು ತೆಗದುಕೊಂಡು ಓದಿ. ನಿಮ್ಮ ಮಕ್ಕಳಿಗಾಗಿ ಆನ್​ಲೈನ್​ ಕೋರ್ಸ್​ಗಳಿಗೆ ಚಂದದಾರರಾಗಿ. ಮುಂಬರುವ ಎರಡು ವಾರ ಬಹಳ ಮುಖ್ಯವೆಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಪ್ಯೂಗೆ ಕಮಲ್​ ಸಹಮತ ವ್ಯಕ್ತಪಡಿಸಿದ್ದಾರೆ. ಸಹ ನಟರಾದ ವಿಜಯ್​, ಅಜಿತ್​ ಮತ್ತು ರಜಿನಿಕಾಂತ್​ ಸೇರಿದಂತೆ ಇತರರು ಮಾರ್ಚ್​ 22ರಂದು ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ಮನೆಯಲ್ಲೇ ಉಳಿಯುವಂತೆ ಹುರಿದುಂಬಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಭೀತಿ: ಸಂಕಷ್ಟದಲ್ಲಿರೋ ದಿನಗೂಲಿ ನೌಕರರಿಗೆ ಪ್ರತಿದಿನ 1000 ರೂ. ನೀಡುವುದಾಗಿ ಸಿಎಂ ಯೋಗಿ ಘೋಷಣೆ

    ಯಾರೂ ಸೇಫ್ ಅಲ್ಲ ಈ ಕರೊನಾದಿಂದ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts