More

    ಕರ್ನಾಟಕದಲ್ಲಿ ಮದ್ಯ ಮಾರಾಟ ಮಾಡಿದ್ರೆ, ನೀವೂ ಮಾಡ್ಬೇಕು ಅಂತ ರೂಲ್ಸ್ ಇದೆಯಾ?

    ದೇಶಾದ್ಯಂತ ಲಾಕ್​ಡೌನ್​ 3.0 ಜಾರಿಯಲ್ಲಿದೆ. ನಿಯಮಗಳಲ್ಲಿ ಒಂದಷ್ಟು ಸಡಿಲಿಕೆ ಮಾಡಿ ಏನಿರುತ್ತೆ, ಏನಿರಲ್ಲ ಎಂಬುದನ್ನು ಆಯಾ ಸರ್ಕಾರಗಳು ಘೋಷಣೆ ಮಾಡಿಕೊಂಡಿವೆ. ಕರ್ನಾಟಕದಲ್ಲೂ ಲಾಕ್​ಡೌನ್​ ಸಡಿಲಿಕೆ ಆಗಿ ಮದ್ಯ ಮಾರಾಟ, ಅಂಗಡಿ ಮುಂಗಟ್ಟುಗಳು ತೆರೆದಿವೆ. ಹೀಗಿರುವಾಗ ಪಕ್ಕದ ತಮಿಳು ನಾಡಿನಲ್ಲೂ ಮದ್ಯ ಮಾರಾಟಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ, ಅಲ್ಲಿನ ಸರ್ಕಾರದ ಈ ನಿರ್ಧಾರಕ್ಕೆ ಕಮಲ್​ ಹಾಸನ್​ ಕಿಡಿಕಾರಿದ್ದಾರೆ. ಸರ್ಕಾರದ ನಡೆಗೆ ಛೀಮಾರಿ ಹಾಕಿದ್ದಾರೆ.

    ಇದನ್ನೂ ಓದಿ: ನೋಡಲಾಗಲಿಲ್ಲ ಬಾಯಾರಿದವರ ಬಾಧೆ.. ಯೋಗರಾಜ್​ ಭಟ್​ ಕಡೆಯಿಂದ ಬಂತು ಹೊಸ ಗೀತೆ

    ‘ಸರ್ಕಾರ ಕೋಯಂಬೇಡು ಮಾರುಕಟ್ಟೆಯನ್ನು ಕರೊನಾದಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಸರ್ಕಾರದ ಈ ತಪ್ಪು ಹೆಜ್ಜೆಯಿಂದಾಗಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಲೆತೆರಬೇಕಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: VIDEO| ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್ ವರ್ಕೌಟ್​ ನೋಡಿದ್ರೆ, ನೀವು ಖಂಡಿತ ದಂಗಾಗ್ತಿರಾ!

    ಮೇ. 4ರಂದು ಕರ್ನಾಟಕದಲ್ಲಿ ಮದ್ಯ ಮಾರಾಟ ಆರಂಭವಾಗಿದ್ದೇ ತಡ, ಪಕ್ಕದ ರಾಜ್ಯಗಳಲ್ಲಿಯೂ ಈ ಸುದ್ದಿ ಮುಟ್ಟಿತ್ತು. ಅಷ್ಟೇ ಅಲ್ಲ ಒಂದೇ ದಿನಕ್ಕೆ ಬರೋಬ್ಬರಿ 50 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿತ್ತು. ಇದನ್ನು ಗಮನದಲ್ಲಿಟ್ಟುಕೊಂಡೇ ತಮಿಳುನಾಡಿನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಇದನ್ನೇ ಗಂಭೀರವಾಗಿ ಪರಿಗಣಿಸಿದ ಕಮಲ್​, ಬೇರೆ ರಾಜ್ಯಗಳು ಅನುಮತಿ ನೀಡಿವೆ ಎಂದ ಮಾತ್ರಕ್ಕೆ ನಮ್ಮಲ್ಲೂ ಅನುಮತಿ ನೀಡಲೇಬೇಕಾ ಎಂದು ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
    ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕಮಲ್​ ಹಾಸನ್​ ಪ್ರತಿಕ್ರಿಯೆಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. (ಏಜೆನ್ಸೀಸ್​)

    ಬುಧವಾರದಿಂದ ಧಾರಾವಾಹಿ ಶೂಟಿಂಗ್‌ಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts