More

    ಬ್ರಹ್ಮಾವರದಲ್ಲೇ 38ನೇ ಕಳ್ತೂರು, ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒಕ್ಕೊರಲ ಆಗ್ರಹ

    ಕೊಕ್ಕರ್ಣೆ: ಪ್ರಸಕ್ತ ಇರುವಂತೆ 38ನೇ ಕಳ್ತೂರು ಗ್ರಾಮವನ್ನು ಬ್ರಹ್ಮಾವರ ತಾಲೂಕಿನಲ್ಲೇ ಉಳಿಸಿಕೊಳ್ಳಬೇಕು ಎಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಲ ಬೇಡಿಕೆ ಮಂಡಿಸಿದರು.

    38ನೇ ಕಳ್ತೂರು ಗ್ರಾಪಂನ 2021-21ನೇ ಸಾಲಿನ ವಿಶೇಷ ಗ್ರಾಮಸಭೆಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೆಂಜೂರು ಸುರಕ್ಷಿತ ಸೇವಾ ಸಮಿತಿ ಭವನದಲ್ಲಿ ಬುಧವಾರ ಜರುಗಿತು.ಗ್ರಾಮವನ್ನು ಹೆಬ್ರಿ ತಾಲೂಕಿಗೆ ಸೇರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸಭೆಯಲ್ಲಿ ವಿಶೇಷ ಸಭೆ ನಡೆದು ಈ ಮೇಲಿನ ನಿರ್ಣಯ ಕೈಗೊಳ್ಳಲಾಯಿತು.
    ಗ್ರಾಪಂ ಸದಸ್ಯ ಆದರ್ಶ ಶೆಟ್ಟಿ ಕೆಂಜೂರು ಮಾತನಾಡಿ, ಹಲವು ವರ್ಷಗಳಿಂದ ಈ ಕುರಿತು ವಿಶೇಷ ಸಭೆಗಳನ್ನು, ಚರ್ಚೆಗಳನ್ನು ಮಾಡಿದ್ದು ನಿರ್ಣಯವನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಪದೇ ಪದೆ ಈ ವಿಷಯ ಕುರಿತು ಅನಗತ್ಯ ಚರ್ಚೆ ಬೇಡ ಎಂದು ಹೇಳಿದರು.

    ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಶಾಂತರಾಜ ಶೆಟ್ಟಿ ಮಾತನಾಡಿ, ಬ್ರಹ್ಮಾವರದಲ್ಲಿ ತಹಸೀಲ್ದಾರ್, ಕಚೇರಿ ರೈತ ಸಂಪರ್ಕ ಕೇಂದ್ರ, ಸಬ್ ರಿಜಿಸ್ಟರ್ ಕಚೇರಿ, ಕೃಷಿ ಇಲಾಖೆ, ಮೆಸ್ಕಾಂ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇನ್ನಿತರ ಕಚೇರಿಗಳು ಇರುವುದರಿಂದ ನಮ್ಮ ಗ್ರಾಮ ಬ್ರಹ್ಮಾವರ ತಾಲೂಕಿನಲ್ಲಿಯೇ ಉಳಿಯಲಿ ಎಂದು ಅಭಿಪ್ರಾಯಪಟ್ಟರು.
    ಬಿಎಸ್ಸೆನ್ನೆಲ್ ನಿವೃತ್ತ ಅಧಿಕಾರಿ ರಘುರಾಮ ಶೆಟ್ಟಿ ಕೆಂಜೂರು ಮಾತನಾಡಿ, ಜನರಿಗೆ ಎಲ್ಲ ಸೌಲಭ್ಯಗಳು ಸ್ಥಳೀಯ ಗ್ರಾಪಂನಲ್ಲಿ ಸಿಗಲಿ. ಕಚೇರಿಯಿಂದ ಕಚೇರಿಗೆ ಅಲೆದಾಟ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts