More

    ಸ್ವಕ್ಷೇತ್ರದ ಶಾಲೆಗಳಲ್ಲಿ ಬೆಳೆಯಲಿವೆ ಕಲ್ಪವೃಕ್ಷ

    ಬಂಕಾಪುರ: ಶಿಗ್ಗಾಂವಿ-ಸವಣೂರ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿರುವ ಸಂಭ್ರಮಕ್ಕೆ ಸ್ವಕ್ಷೇತ್ರ ಶಿಗ್ಗಾಂವಿ ತಾಲೂಕಿನ 245 ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕಲ್ಪವೃಕ್ಷ (ತೆಂಗಿನ ಸಸಿ)ಗಳನ್ನು ನೆಟ್ಟು ಕ್ಷೇತ್ರದ ಜನರು ಸಂಭ್ರಮಿಸಿದರು.

    ತಾಲೂಕಿನ ಹಳೇಬಂಕಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಕೇತಿಕವಾಗಿ ಬಸವರಾಜ ಬೊಮ್ಮಾಯಿ ಅವರ ಅಭಿಮಾನಿಗಳ ಬಳಗ ಗುರುವಾರ ಏರ್ಪಡಿಸಿದ್ದ ತೆಂಗಿನ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಮಾಜ ಸೇವಕ ನವೀನ ಸವಣೂರ ಮಾತನಾಡಿ, ನಗರ ಪ್ರದೇಶಗಳ ಶಾಲೆಯಲ್ಲಿ ಸಿಗುವ ಹೈಟೆಕ್ ಶಿಕ್ಷಣ ಸೌಲಭ್ಯವನ್ನು ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ನೀಡುವ ಮೂಲಕ ಇಲ್ಲಿನ ಬಡ ಮತ್ತು ರೈತರ ಮಕ್ಕಳು ಜ್ಞಾನವಂತರಾಗಬೇಕು. ಉದ್ಯೋಗ ಗಿಟ್ಟಿಸಿಕೊಂಡು ಸ್ವಾವಲಂಬಿ ಬದುಕು ಸಾಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆ ರೂಪಿಸಿದ್ದಾರೆ. ಶೀಘ್ರದಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಶಿಕ್ಷಣದ ಸೌಲಭ್ಯ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

    ಪ್ರಕಾಶ ದಾಸನೂರು, ಶಿವಪ್ರಸಾದ ಸುರಗಿಮಠ, ಮುಖಂಡರಾದ ಮಾಲತೇಶ ಬಾವಿಕಟ್ಟಿ, ನಾಗರಾಜ ಪಾಟೀಲ, ಹನುಮಂತ ಹಳ್ಯಾಳ, ಅರುಣ ಚಂದ್ರಗೇರಿ, ಪ್ರವೀಣ ಕಲಿವಾಳ, ಪ್ರಕಾಶ ಹಡಪದ, ಕರಬಸಪ್ಪ ಸವಣೂರ, ಟೋಪಣ್ಣ ಮುರಾರಿ, ಚನ್ನವೀರಯ್ಯ ಚಿಗರಿಮಠ, ಸುಭಾಸ ತಳವಾರ, ಸುರೇಶ ಮುರಾರಿ, ಶಂಕ್ರೆಪ್ಪ ಮೂಡಣ್ಣವರ, ಹನುಮಂತ ಸುರಗಿಹಳ್ಳಿ, ಸಚಿನ ಗಾಜಿಪುರ, ರಾಜೇಸಾಬ ನದಾಫ್, ನಿಂಗಪ್ಪ ವಗ್ಗನವರ, ಮಲ್ಲೇಶಪ್ಪ ಬಾವಿಕಟ್ಟಿ ಸೇರಿ ಶಾಲೆಯ ಶಿಕ್ಷಕರು, ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts