More

    ದಾದಿಯರು ಮಾತಾ ಸ್ವರೂಪಿಗಳು

    ಕಲಕೇರಿ: ಹಗಲು-ರಾತ್ರಿಯನ್ನದೆ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳುವ ದಾದಿಯರು ದೇವರೇ ಕಳುಹಿಸಿದ ಮಾತಾ ಸ್ವರೂಪಿಗಳು ಎಂದು ಡಾ. ಪ್ರಭಾಕರ ತೇರದಾಳ ಹೇಳಿದರು.

    ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ನಡೆದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.

    ದಾದಿಯರು ಎಲ್ಲ ರೋಗಿಗಳನ್ನು ಸಮಾನತೆಯಿಂದ ಕಂಡು ವೃತ್ತಿ ತನ್ಮಯತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಎಂದರು.
    ದಾದಿಯರನ್ನು ವೈದ್ಯರು ಸಹಾಯಕರಂತೆ ಮತ್ತು ರೋಗಿಗಳು ತಮ್ಮ ಸೇವಕರಂತೆ ಕಾಣದೆ ವೈದ್ಯರಷ್ಟೇ ಸಮಾನವಾಗಿ ಗೌರವಿಸಬೇಕು ಎಂದರು.

    ಎಸ್.ಬಿ. ಜೇವೂರ ಮತ್ತು ಸಂತೋಷ ಟೆಂಗಳಿ ಮಾತನಾಡಿದರು. ಕಿರಿಯ ಶುಶ್ರೂಷಕಿಯರಾದ ಭಾಗ್ಯಶ್ರೀ ಬೂದಿಹಾಳ, ವಿಜಯಲಕ್ಷ್ಮೀ ಬಬಲೇಶ್ವರ, ಲಕ್ಷ್ಮೀ ಮಾಂಗ್, ಪರಮಾನಂದ ಲಿಂಗದಳ್ಳಿ, ಎಂ.ಸಿ. ಪಟೇಲ, ಸಂಗೀತಾ ಪಾಸೋಡಿ, ಸುಶ್ಮಿತಾ ಮುಲ್ಲಾಮಠ, ಭಾರತಿ ಮಿಡಕನಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

    ಈ ವೇಳೆ ಹಿರಿಯ ಶುಶ್ರೂಷಾಧಿಕಾರಿ ಎಂ.ಸಿ. ಪಟೇಲ, ಯುವ ಮುಖಂಡ ಹಣಮಂತ ವಡ್ಡರ, ಈರಘಂಟೆಪ್ಪ ಮೋಪಗಾರ, ಅಪ್ಪಾಸಾಬ ಮಾಂಗ್, ಎಂ.ಎಂ. ಹಂಡೇಬಾಗ, ಮಂಜುನಾಥ ಮಹಾಪುರುಷ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts