More

    ಕಲಾಸಿಪಾಳ್ಯದಲ್ಲಿ ಕಾರ್ಪೊರೇಟರ್ ಪತಿ, ಪುತ್ರನ ಮೇಲೆ ಸಿಟ್ಟು: ಸಗಣಿ ಎರಚಿ ಫುಟ್​ಪಾತ್ ವ್ಯಾಪಾರಿಗಳ ಆಕ್ರೋಶ

    ಬೆಂಗಳೂರು: ಕಲಾಸಿಪಾಳ್ಯದಲ್ಲಿ ಫುಟ್​ಪಾತ್ ಮೇಲಿನ ತರಕಾರಿ ಅಂಗಡಿಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳ ಜತೆ ತೆರಳಿದ್ದ ಕಾರ್ಪೊರೇಟರ್ ಪತಿ ಹಾಗೂ ಪುತ್ರನ ಮೇಲೆ ಬೀದಿಬದಿ ವ್ಯಾಪಾರಿಗಳು ಸಗಣಿ ಎರಚಿದ್ದಾರೆ. ಬಳಿಕ ಎರಡೂ ಗುಂಪುಗಳು ಪ್ರತಿಭಟನೆ ನಡೆಸಿ ಹೈಡ್ರಾಮಾ ಸೃಷ್ಟಿಸಿವೆ. ಬುಧವಾರ ಬೆಳಗ್ಗೆ 6 ಗಂಟೆಯಲ್ಲಿ ಬಿಬಿಎಂಪಿ ಸದಸ್ಯೆ ಪ್ರತಿಭಾ ಪತಿ ಧನರಾಜ್ ಹಾಗೂ ಪುತ್ರ ವೈಷ್ಣವ್ ಮೇಲೆ ವ್ಯಾಪಾರಿಗಳು ಸಗಣಿ ಎರಚಿದ್ದಾರೆ. ಕೃತ್ಯ ಎಸಗಿದ ವ್ಯಾಪಾರಿಗಳಾದ ಸೆಂದಿಲ್ ಹಾಗೂ ಇತರರ ವಿರುದ್ಧ ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದನ್ನೂ ಓದಿ: ರೌಡಿ ಮೂಲಕ ಹಣ ವಸೂಲಿ: ಸಿಸಿಬಿ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳ ಖತರ್​ನಾಕ್ ಐಡಿಯಾ!

    ಪಾದಚಾರಿ ಮಾರ್ಗದಲ್ಲಿದ್ದ ಮಳಿಗೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿ ರವೀಂದ್ರ ಹಾಗೂ ಇತರರ ಜತೆ ಧನರಾಜ್ ಮಾರುಕಟ್ಟೆಗೆ ಬಂದಿದ್ದರು. ಆದರೆ, ಅಧಿಕಾರಿಗಳು ಬರುವ ಸುದ್ದಿ ಮೊದಲೇ ತಿಳಿದುಕೊಂಡಿದ್ದ ವ್ಯಾಪಾರಿಗಳು ಸಗಣಿ ಪೊಟ್ಟಣಗಳನ್ನು ಸಿದ್ಧಪಡಿಸಿಕೊಂಡಿದ್ದರು. ಮಳಿಗೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಧನರಾಜ್​ಹಾಗೂ ಅವರ ಪುತ್ರನ ಮೇಲೆ ಸಗಣಿ ಪೊಟ್ಟಣ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಧನರಾಜ್ ಬೆಂಬಲಿಗರು ಮತ್ತು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿತ್ತು. ಕೂಡಲೇ ಸ್ಥಳೀಯರು ಹಾಗೂ ಬಿಬಿಎಂಪಿ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು.

    ಇದನ್ನೂ ಓದಿ: ಮದ್ಯಪ್ರಿಯರಿಗಷ್ಟೇ ಅಲ್ಲ, ಮದ್ಯ ಮಾರಾಟಗಾರರಿಗೂ ದೀದಿ ನಾಡಲ್ಲಿ ಭಾರಿ ಸಂಕಷ್ಟ!

    ಧನರಾಜ್ ವಿರುದ್ಧ ಬಡ್ಡಿ ವ್ಯವಹಾರ ಆರೋಪ: ಕಲಾಸಿಪಾಳ್ಯದಲ್ಲಿ ವ್ಯಾಪಾರ ನಡೆಸುವವರು ತಮ್ಮ ಬಳಿಯೇ ಬಡ್ಡಿಗೆ ಹಣ ಪಡೆಯುವಂತೆ ಧನರಾಜ್ ಕಡೆಯವರು ಒತ್ತಾಯಿಸುತ್ತಾರೆ. ವ್ಯಾಪಾರಿಗಳ ಬಳಿ ಬಡ್ಡಿ ವ್ಯವಹಾರ ನಡೆಸುವ ಧನರಾಜ್ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: 54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

    ಕಲಾಸಿಪಾಳ್ಯದಲ್ಲಿ ಕಾರ್ಪೊರೇಟರ್ ಪತಿ, ಪುತ್ರನ ಮೇಲೆ ಸಿಟ್ಟು: ಸಗಣಿ ಎರಚಿ ಫುಟ್​ಪಾತ್ ವ್ಯಾಪಾರಿಗಳ ಆಕ್ರೋಶಮಾರುಕಟ್ಟೆಯಲ್ಲಿ ಬಿಗುವಿನ ವಾತಾವರಣ: ಲಾಕ್​ಡೌನ್ ನಿಯಮ ಜಾರಿಯಲ್ಲಿದ್ದರೂ ಧನರಾಜ್, ಬೆಂಬಲಿಗರೊಂದಿಗೆ ರಸ್ತೆಯಲ್ಲೇ ಕುಳಿತು ಧರಣಿ ನಡೆಸಿ ಸಗಣಿ ಎರಚಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಅದಕ್ಕೆ ಪ್ರತಿಯಾಗಿ ವ್ಯಾಪಾರಿಗಳ ಗುಂಪು ಧನರಾಜ್ ವಿರುದ್ಧ ಧಿಕ್ಕಾರ ಕೂಗಿತು. ಎರಡೂ ಗುಂಪು ಪ್ರತಿಭಟನೆ ನಡೆಸಿದ್ದರಿಂದ ಮಾರುಕಟ್ಟೆಯಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಉಂಟಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಯಮದ ಪ್ರಕಾರ ಪ್ರತಿಭಟನೆ ನಡೆಸುವಂತಿಲ್ಲ ಎಂದು ಎರಡು ಗುಂಪುಗಳ ಸದಸ್ಯರ ಮನವೊಲಿಸಲು ಹರಸಾಹಸಪಟ್ಟರು. ಬಳಿಕ ಧನರಾಜ್, ಪುತ್ರನೊಂದಿಗೆ ಕಲಾಸಿಪಾಳ್ಯ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದೀಗ ಬೀದಿಬದಿ ವ್ಯಾಪಾರಿಗಳೂ ಪ್ರತಿ ದೂರು ನೀಡಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ

    ಹಫ್ತಾ ವಸೂಲಿಗಾರರ ಕೃತ್ಯ ಆರೋಪ: ಕಲಾಸಿಪಾಳ್ಯ ಮುಖ್ಯರಸ್ತೆ ಬದಿಯಲ್ಲಿ ವ್ಯಾಪಾರಿಗಳು ಅನುಮತಿಯಿಲ್ಲದೇ ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಬುಧವಾರ ಬೆಳಗ್ಗೆ 5.30ಕ್ಕೆ ಮಾರುಕಟ್ಟೆ ಪರಿಶೀಲನೆಗೆ ಬರುತ್ತಿರುವುದಾಗಿ ನಮಗೆ ಬಿಬಿಎಂಪಿ ಅಧಿಕಾರಿ ರವೀಂದ್ರ ಹೇಳಿದ್ದರು. ಕಾರಣಾಂತರಗಳಿಂದ ಪರಿಶೀಲನೆ ಸ್ಥಳಕ್ಕೆ ನನಗೆ ಹೋಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಧನರಾಜ್ ಅಧಿಕಾರಿಗಳ ಜತೆ ಹೋಗಿದ್ದರು. ಆ ವೇಳೆ ರಸ್ತೆ ಬದಿ ತರಕಾರಿ ಮಾರುತ್ತಿದ್ದ ವ್ಯಾಪಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಸಗಣಿ ಎಸೆದಿದ್ದಾರೆ. ಕೆಲ ಕಿಡಿಗೇಡಿಗಳು ಮಾರುಕಟ್ಟೆ ವ್ಯಾಪಾರಿಗಳಿಂದ ಪ್ರತಿದಿನ 500 ರಿಂದ ಸಾವಿರ ರೂ. ಹಫ್ತಾ ವಸೂಲು ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಕಿಡಿಗೇಡಿಗಳೇ ಕೃತ್ಯ ಎಸಗಿದ್ದಾರೆ ಎಂದು ಕಾರ್ಪೊರೇಟರ್ ಪ್ರತಿಭಾ ಧನರಾಜ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts