More

    ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

    ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ದೈತ್ಯ ದೇಹದಿಂದ ಮನೆಮಾತಾಗಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಸೋಮವಾರ ಸಂಜೆ ಬಹುಅಂಗಾಂಗ ವೈಲ್ಯದಿಂದ ಕೊನೆಯುಸಿರೆಳೆದಿದ್ದಾರೆ.

    ಕಳೆದ ಕೆಲವು ದಿನಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಅವರನ್ನು ಇತ್ತೀಚೆಗೆ ನಗರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಚಿಕಿತ್ಸೆಗೆ ಬುಲೆಟ್ ಚಿಕಿತ್ಸೆಗೆ ಸ್ಪಂದಿಸಿದರಾದರೂ, ಕ್ರಮೇಣ ಅವರ ಆರೋಗ್ಯ ಸ್ಥಿತಿ ಗಂಭಿರವಾಗಿತ್ತು. ಬುಲೆಟ್ ಪ್ರಕಾಶ್ ಅವರ ಆರೋಗ್ಯದ ಕುರಿತಾ ಹಲವು ವದಂತಿಗಳು ಹಬ್ಬಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಪತ್ರಿಕಾ ಪ್ರಕಟಣೆಯೊಂದು ಹೊರಬಿದ್ದಿತ್ತು. ಈ ಪ್ರಕಟಣೆಯಲ್ಲಿ ಬುಲೆಟ್ ಪ್ರಕಾಶ್ ಅವರಿಗೆ ಕಿಡ್ನಿ ಮತ್ತು ಲಿವರ್ ವೈಲ್ಯ ಆಗಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ಹೇಳಲಾಗಿತ್ತು. ಸತತ ಹೋರಾಟದ ನಂತರ ಬುಲೆಟ್ ಪ್ರಕಾಶ್ ಇನ್ನಿಲ್ಲವಾಗಿದ್ದಾರೆ.

    90ರ ದಶಕದ ಅಂತ್ಯದಲ್ಲಿ ಎನ್‌ಫೀಲ್ಡ್ ಬುಲೆಟ್ ಬೈಕ್ ಹೊಂದಿದ ಪ್ರಕಾಶ್, ಬುಲೆಟ್ ಪ್ರಕಾಶ್ ಎಂದೇ ಜನಪ್ರಿಯರಾಗಿದ್ದರು. ಶಿವರಾಜಕುಮಾರ್ ಅಭಿನಯದ ‘ಎಕೆ 47’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬುಲೆಟ್ ಪ್ರಕಾಶ್ ಅವರು, ‘ಧ್ರುವ’, ‘ಕಲಾಸಿಪಾಳ್ಯ’, ‘ಜಾಕಿ’, ‘ಪರಾರಿ’, ‘ಆರ್ಯನ್’ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಜತೆಗೆ ‘ಐತಲಕ್ಕಡಿ’ ಎಂಬ ಚಿತ್ರದ ನಿರ್ಮಾಣದಲ್ಲಿ ಪಾಲುದಾರರೂ ಆಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ, ಅಭಿನಯಿಸುವುದನ್ನು ಕಡಿಮೆ ಮಾಡಿದ್ದ ಬುಲೆಟ್ ಪ್ರಕಾಶ್ ಅವರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ನೂರಾರು ಅಭಿಮಾನಿಗಳನ್ನು ಅಗಲಿದ್ದಾರೆ.

    ಮತ್ತೆ ನಿರ್ಮಾಣಕ್ಕೆ ಪುನೀತ್ … ಹೊಸ ಚಿತ್ರ ಯಾವುದು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts