More

    ಟೆಂಡರ್​ ಕರೆಯುವವರೆಗೂ ಕಳಸಾ ಬಂಡೂರಿ ಹೋರಾಟ ನಿಲ್ಲಲ್ಲ ಎಂದ ರೈತ ಸೇನಾ ಅಧ್ಯಕ್ಷ..!

    ಗದಗ: ದಶಕಗಳಿಂದ ನಡೆಯುತ್ತಿರುವ ಕಳಸಾ ಬಂಡೂರಿ ಹೋರಾಟಕ್ಕೆ ಇಂದು ಬಹುದೊಡ್ಡ ಜಯ ಸಿಕ್ಕಿದ್ದು ಕೇಂದ್ರ ಜಲಶಕ್ತಿ ಸಚಿವರು ಯೋಜನೆಯ ವಿಸ್ತೃತ ವರದಿಗೆ ಒಪ್ಪಿಗೆ ನೀಡಿದ್ದಾರೆ. ಇನ್ನು ಟೆಂಡರ್​ ಕರೆದು ಕಾಮಗಾರಿ ಶುರು ಮಾಡಿದರೆ ಯೋಜನೆ ಪೂರ್ಣವಾಗುತ್ತದೆ. ಆದರೆ ಇಲ್ಲೊಬ್ಬ ರೈತ ಮುಖಂಡರು, ‘ನಮ್ಮ ಹೋರಾಟ ಇನ್ನೂ ನಿಂತಿಲ್ಲ’ ಎಂದಿದ್ದಾರೆ.

    ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರಮಠ ಗದಗ ಜಿಲ್ಲೆ ನರಗುಂದ ಪಟ್ಟಣದ, ರೈತ ಹೋರಾಟ ವೇದಿಕೆಯಲ್ಲಿ ಹೇಳಿಕೆ ನೀಡಿದ್ದು ‘ಕೇಂದ್ರ ಜಲಸಂಪನ್ಮೂಲ ಇಲಾಖೆ 3.9 ಟಿಎಂಸಿ ನೀರಿನ ಬಳಕೆಗೆ ಅನುಮತಿ ನೀಡಿದೆ. ನಿರಂತರವಾಗಿ ಹೋರಾಟ ಮಾಡಿದ ಎಲ್ಲರಿಗೂ ಶ್ರೇಯಸ್ಸು ಸಿಗಬೇಕು. ಇಡೀ ರಾಜ್ಯದ ರೈತರ ಪರವಾಗಿ ನಾನು ಅಭಿನಂದನೆ ಹೇಳುತ್ತೇನೆ. ಇವತ್ತಿಗೆ ಹೋರಾಟ ಶುರುವಾಗಿ 2721 ದಿನ ಕಳೆದಿದೆ.

    ಅನುಮತಿ ಸಿಕ್ಕಿದ್ದಕ್ಕೆ ಖುಷಿಪಟ್ಟು ಹಬ್ಬ ಆಚರಿಸಲು ಆಗಲ್ಲ. ಯೋಜನೆಯನ್ನ ರಾಜಕೀಯ ದಾಳವಾಗಿ ಬಳಸಿಕೊಂಡು ವಿಳಂಬ ಮಾಡಿದ್ದಾರೆ‌. ಪರವಾನಿಗೆ ನೀಡಿದ್ದು ಹೋರಾಟಕ್ಕೆ ಅರ್ಧ ಜಯ ಸಿಕ್ಕಿದ ಹಾಗೆ. ಆದೇಶ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು. ಮುಖ್ಯಮಂತ್ರಿಗಳು ಕಾಮಗಾರಿ ಆರಂಭಿಸಲು ಟೆಂಡರ್ ಕರೆಯಬೇಕು. ಟೆಂಡರ್ ಕರೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದಿದ್ದಾರೆ.

    ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಜಲ ಆಯೋಗ..!

    ಅದಲ್ಲದೇ ರೈತ ಮುಖಂಡ ವಿರೇಶ್​, ಮುಂದಿನ ಹೋರಾಟದ ಬಗ್ಗೆಯೂ ಎಚ್ಚರಿಕೆ ನೀಡಿದ್ದು ‘ಇದು ಕುಡಿಯುವ ನೀರಿಗಾಗಿ ಹೋರಾಟ. ಮುಂದಿನ ದಿನಗಳಲ್ಲಿ ಕೃಷಿ ನೀರಿಗಾಗಿಯೂ ಹೋರಾಟ ಮಾಡುತ್ತೇವೆ’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts