More

    ತುಳಸಿಗೇರಿ ದೇವಾಲಯದ ಅಭಿವೃದ್ಧಿಗೆ ಕ್ರಮ

    ಕಲಾದಗಿ: ಸಮೀಪದ ತುಳಸಿಗೇರಿಯ ಪ್ರಸಿದ್ಧ ಹನುಮಂತ ದೇವರ ದೇವಸ್ಥಾನಕ್ಕೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.

    ವಿಜಯಪುರದಿಂದ ಜಿಲ್ಲೆಗೆ ಆಗಮಿಸಿದ ಅವರು, ಮೊದಲು ತುಳಸಿಗೇರೆಪ್ಪನ ಸನ್ನಿಧಿಗೆ ಬಂದು ದೇವಾಲಯದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿ ನಂತರ ದೇವರ ದರ್ಶನ ಮಾಡಿದರು. ಗರ್ಭಗೃಹದ ಬಳಿ ದೇವಾಲಯದ ಅರ್ಚಕರಿಂದ ಸನ್ಮಾನ ಸ್ವೀಕರಿಸಿದರು.

    ಅಭಿವೃದ್ಧಿಗೆ ಮನವಿ: ದೇವಾಲಯದಲ್ಲಿ ಭಕ್ತರ ಅನುಕೂಲತೆಗಾಗಿ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ದೇವಾಲಯದ ಆರ್ಚಕರು ಹಾಗೂ ಮಾಜಿ ಶಾಸಕ ಪಿ.ಎಚ್.ಪೂಜಾರ ಮತ್ತು ಊರಿನ ಪ್ರಮುಖರು ಮನವಿ ಮಾಡಿದರು. ಜತೆಗೆ ದೇವಾಲಯಕ್ಕೆ ಹೊಂದಿಕೊಂಡಿರುವ ಅತಿಕ್ರಮಣವನ್ನು ತೆರವುಗೊಳಿಸಿ ದೇವಾಲಯಕ್ಕೆ ಸಂಬಂಧಿಸಿದ ಜಾಗವನ್ನು ಗುರುತಿಸಿ ಅಲ್ಲಿ ಕಾಂಪೌಂಡ್ ನಿರ್ಮಿಸಲು 1 ಕೋಟಿ ರೂ.ನಷ್ಟು ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ದೇವಾಲಯ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಜೆಟ್ ನಂತರ ವಿಶೇಷ ಅನುದಾನವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

    ದೇವಾಲಯ ಆಡಳಿತಾಧಿಕಾರಿ, ಬಾಗಲಕೋಟೆ ತಾಲೂಕು ತಹಸೀಲ್ದಾರ್ ಜಿ.ಎಸ್. ಹಿರೇಮಠ, ಗ್ರಾಮದ ಪ್ರಮುಖರಾದ ತಿಮ್ಮನಗೌಡ ಪಾಟೀಲ, ರಾಮಣ್ಣ ರೂಗಿ, ಮಲ್ಲಪ್ಪ ಹೊನ್ನಪ್ಪನವರ, ನರಸಿಂಹಪ್ಪಗೌಡ ಪಾಟೀಲ, ಮಂಜುಗೌಡ ಪಾಟೀಲ, ನಾರಾಯಣ ಪೂಜಾರ, ಶಂಕ್ರಪ್ಪ ದಾಸಣ್ಣವರ, ದತ್ತಾತ್ರೇಯ ಪೂಜಾರ, ಶ್ರೀನಿವಾಸ ಪೂಜಾರ, ಭೀನಗೌಡ ಪಾಟೀಲ, ತುಳಸಪ್ಪ ದಾಸರ ಮುಂತಾದವರಿದ್ದರು.



    ತುಳಸಿಗೇರಿ ದೇವಾಲಯದ ಅಭಿವೃದ್ಧಿಗೆ ಕ್ರಮ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts