More

    ಪಿಂಚಣಿ ಅದಾಲತ್ ಸದುಪಯೋಗವಾಗಲಿ

    ಕಲಾದಗಿ: ಅರ್ಹ ಫಲಾನುಭವಿಗಳು ಸರ್ಕಾರದ ಪಿಂಚಣಿಯಿಂದ ವಂಚಿತರಾಗಬಾರದೆಂದು ಸರ್ಕಾರ ಪಿಂಚಣಿ ಅದಾಲತ್‌ಗಳನ್ನು ಆಯೋಜಿಸುತ್ತಿದ್ದು, ಅರ್ಹರು ಇದರ ಸದುಪಯೋಗ ಪಡೆಯಬೇಕು ಎಂದು ತಹಸೀಲ್ದಾರ್ ಜಿ.ಎಸ್. ಹಿರೇಮಠ ಹೇಳಿದರು.

    ಗ್ರಾಮದ ಗುರುಲಿಂಗೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಲಾದಗಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್’ನಲ್ಲಿ ವಿವಿಧ ಅರ್ಹ ಫಲಾನುಭವಿಗಳಿಗೆ ಅರ್ಹತಾ ಪತ್ರ ವಿತರಿಸಿ ಮಾತನಾಡಿದರು.

    ಮಧ್ಯವರ್ತಿಗಳಿಗೆ ಹಣ ನೀಡಿ ಪಿಂಚಣಿ ಪಡೆಯಲು ಪ್ರಯತ್ನಿಸಬೇಡಿ. ಅದು ಪಿಂಚಣಿ ಪಡೆಯಲು ತಪ್ಪು ದಾರಿಯಾಗಿದೆ. ಅರ್ಹರು ನೇರವಾಗಿ ಕಚೇರಿಯನ್ನು ಸಂಪರ್ಕಿಸಿ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಹೇಳಿದರು.

    ಅದಾಲತ್‌ನಲ್ಲಿ ಗ್ರಾಮವನ್ನೊಳಗೊಂಡಂತೆ, ಯಂಕಂಚಿ, ತುಳಸಿಗೇರಿ, ಶಾರದಾಳ, ಚಿಕ್ಕಶೆಲ್ಲಿಕೇರಿ, ದೇವನಾಳ, ಉದಗಟ್ಟಿ ಮುಂತಾದ ಊರುಗಳಿಂದ ಬಂದಿದ್ದ 18 ಅರ್ಹ ಲಾನುಭವಿಗಳಿಗೆ ವಿವಿಧ ಪಿಂಚಣಿಯ ಅರ್ಹತಾ ಪತ್ರವನ್ನು ವಿತರಿಸಲಾಯಿತು.

    ನಾಡ ಕಚೇರಿ ಉಪತಹಸೀಲ್ದಾರ್ ಪಿ.ಬಿ. ಸಿಂಗ್ರಿ, ಕಂದಾಯ ನಿರೀಕ್ಷಕ ಆರ್.ಆರ್. ಕುಲಕರ್ಣಿ, ಗ್ರಾಮ ಲೆಕ್ಕಾಧಿಕಾರಿಗಳಾದ ಎ.ವಿ. ಸೂರ್ಯವಂಶಿ, ಎಸ್.ಬಿ. ಪಾಟೀಲ, ರವಿ ಕುಳ್ಳೊಳ್ಳಿ, ವಿಜಯಕುಮಾರ ದೇಶಮಾನೆ, ರೇಣುಕಾ ಕದಂಪುರ, ಸಾವಿತ್ರಿ ಸಿಂಗೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts