More

    ಗ್ರಾಪಂ ಚುನಾವಣೆಯಲ್ಲಿ ಗೆದ್ದರೂ ಸಂಭ್ರಮಿಸಲು ಅಭ್ಯರ್ಥಿಯೇ ಬದುಕಿಲ್ಲ!

    ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ, ಮತದಾನ, ಮತ ಎಣಿಕೆ ಹೀಗೆ ಮೂರು ಸಂದರ್ಭದಲ್ಲೂ ರಾಜ್ಯದ ಹಲವೆಡೆ ಆಕಸ್ಮಿಕ ಘಟನೆಯಲ್ಲಿ ಮತದಾರ, ಅಭ್ಯರ್ಥಿ, ಚುನಾವಣಾ ಅಧಿಕಾರಿ, ನಿವೃತ್ತ ಶಿಕ್ಷಕ… ಕೆಲವರು ಸಾವಿಗೀಡಾದರು.

    ಇಂತಹದ್ದೇ ಘಟನೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಂಭವಿಸಿತ್ತು. ಈ ಪಂಚಾಯಿತಿಗೆ ಡಿ.22 ರಂದು ಮತದಾನ ನಡೆದಿತ್ತು. ಚುನಾವಣೆಗೆ ಸ್ಪರ್ಧಿಸಿದ್ದ ಸಿ.ಬಿ. ಅಂಬೋಜಿ ಅವರು ಚುನಾವಣಾ ಫಲಿತಾಂಶಕ್ಕೂ ಮುನ್ನ ಅಂದರೆ ಡಿ.27ರಂದು ಮೃತಪಟ್ಟಿದ್ದರು. ಇಂದು ಹೊರ ಬಿದ್ದ ಫಲಿತಾಂಶದಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಸಂಭ್ರಮ ಆಚರಿಸಲು ಅವರೇ ಇಲ್ಲ. ಇದ್ದನ್ನೂ ಓದಿರಿ ಮೊಬೈಲ್​ ರಿಪೇರಿ ಮಾಡಿಸಿಕೊಳ್ಳುವ ನೆಪದಲ್ಲಿ ಬಂದವಳು ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿದ್ಳು!

    ಸಿ.ಬಿ. ಅಂಬೋಜಿ ಅವರಿಗೆ 414 ಮತ ಬಂದಿದ್ದು, ಗೆಲುವಿನ ಸ್ಥಾನ ಸಿಕ್ಕಿದೆ. ಅವರು ನಿಧನರಾಗಿರುವ ಕಾರಣಕ್ಕೆ ಉಪಚುನಾವಣೆ ನಡೆಯಲಿದೆ. ಖಾನಾಪುರ ತಾಲೂಕಿನ ಹಿರಿಯ ರಾಜಕಾರಣಿ ಆಗಿದ್ದ ಅವರು ವೃತ್ತಿಯಲ್ಲಿ ನ್ಯಾಯವಾದಿ.

    ಗ್ರಾಪಂ ಚುನಾವಣೆಯಲ್ಲಿ ಗೆದ್ದ 28 ವರ್ಷದ ಇಂಜಿನಿಯರಿಂಗ್​ ಉದ್ಯೋಗಿ

    ಗ್ರಾಪಂ ಚುನಾವಣೆ: ಈ ಕ್ಷೇತ್ರಕ್ಕೆ 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಗೆಲವು

    ಭೀಕರ ರಸ್ತೆ ಅಪಘಾತ : ಅಪ್ಪನ ಮತಎಣಿಕೆಗೆ ಹೊರಟ ಮಗ ಮತ್ತು ಇನ್ನೊಬ್ಬನ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts