More

    ದಸರಾ ಹಬ್ಬದಂದು ನಟಿ ಕಾಜಲ್​ ಧರಿಸಿದ್ದ ದಿರಿಸಿನ ಬೆಲೆ ಕೇಳಿದ್ರೆ ದಂಗಾಗ್ತೀರಾ..!

    ಹೈದರಾಬಾದ್​: ಇತ್ತೀಚೆಗಷ್ಟೇ ಟಾಲಿವುಡ್​ ನಟಿ ಕಾಜಲ್​ ಅಗರ​ವಾಲ್​ ಅವರು ದಸರಾ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋವೊಂದು ಹಂಚಿಕೊಂಡಿದ್ದು, ಅದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ದಸರಾಕ್ಕಾಗಿಯೇ ಕಾಜಲ್​ ಅವರು ಕಲರ್​ಫುಲ್​​ ಕುರ್ತಾ ಮತ್ತು ದುಪ್ಪಟ್ಟ ಜತೆಗೆ ಘರಾರಾ ಸೆಟ್ ಖರೀದಿಸಿದ್ದರು.​ ಡಿಸೈನರ್​ ಅರ್ಪಿತಾ ಮೆಹ್ತಾ ಅವರ ನ್ಯೂ ಕಲೆಕ್ಷನ್​ ಬ್ಲರ್ಡ್​ ಲೈನ್ಸ್​ ತಯಾರಿತ ಹೊಸ ಉಡುಗೆಯಾಗಿದ್ದು, ಅದನ್ನು ಧರಿಸಿ ಕಾಜಲ್​ ಹಬ್ಬದಲ್ಲಿ ಸಖತ್​ ಮಿಂಚಿದ್ದಾರೆ.

     

    View this post on Instagram

     

    A post shared by Kajal Aggarwal (@kajalaggarwalofficial) on

    ಕಾಜಲ್​ ಹರಿಬಿಟ್ಟಿರುವ ಫೋಟೋಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಬಂದಿವೆ. ಸಾಕಷ್ಟು ಫೋಟೋಗಳನ್ನು ಸಹ ಅಪ್​ಲೋಡ್​ ಮಾಡಿದ್ದಾರೆ. ಅಲ್ಲದೆ, ಭಾವಿ ಪತಿಯೊಂದಿಗಿರುವ ಫೋಟೋವನ್ನು ಮೊದಲ ಬಾರಿಗೆ ಕಾಜಲ್​ ಶೇರ್​ ಮಾಡಿಕೊಂಡಿದ್ದಾರೆ. ಇನ್ನು ಫೋಟೋ ನೋಡಿದ ಸಾಕಷ್ಟು ಮಂದಿ ಕಾಮೆಂಟ್​ ಮಾಡಿ, ಕಾಜಲ್​ ಸೌಂದರ್ಯವನ್ನು ಹೊಗಳಿದ್ದಾರೆ.

     

    View this post on Instagram

     

    Happy Dussehra from us to you ! @kitchlug #kajgautkitched

    A post shared by Kajal Aggarwal (@kajalaggarwalofficial) on

    ಆದರೆ, ಎಲ್ಲರದ್ದು ಒಂದೇ ಪ್ರಶ್ನೆ ಕಾಜಲ್​ ಧರಿಸಿದ್ದ ಉಡುಪಿನ ಬೆಲೆ ಎಷ್ಟು? ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು, ಕುರ್ತಾ ಮತ್ತು ಘರಾರಾ ಸೆಟ್​ನ ಬೆಲೆ ಬರೋಬ್ಬರಿ 78 ಸಾವಿರ ರೂಪಾಯಿ ಆಗಿದೆ. ಜನಸಾಮಾನ್ಯರಿಗಂತೂ ಕೈಗೆಟುಕದ ಬೆಲೆ ಇದಾಗಿದೆ. ಹಬ್ಬಕ್ಕೆ ಇಷ್ಟೊಂದು ಖರ್ಚು ಮಾಡುವ ಕಾಜಲ್​ ಅವರ ಮದುವೆ ಡ್ರೆಸ್​ ಎಷ್ಟು ಬೆಲೆಯದ್ದಾಗಿರಲಿದೆ ಎಂದು ಈಗಿನಿಂದಲೇ ಅಭಿಮಾನಿಗಳು ಅಂದಾಜು ಹಾಕತೊಡಗಿದ್ದಾರೆ.

     

    View this post on Instagram

     

    💙

    A post shared by Kajal Aggarwal (@kajalaggarwalofficial) on

    ಅಂದಹಾಗೆ ಕಾಜಲ್​ ಇದೇ ಅ. 30ರಂದು ಮುಂಬೈನಲ್ಲಿ ನಡೆಯಲಿರುವ ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಉದ್ಯಮಿ, ಇಂಟಿರಿಯರ್​ ಡಿಸೈನರ್​, ಟೆಕ್​ ಮತ್ತು ವಿನ್ಯಾಸ ಉತ್ಸಾಹಿ ಗೌತಮ್​ ಕಿಟ್ಚ್ಲು ಅವರನ್ನು ಕಾಜಲ್​ ವಿವಾಹವಾಗಲಿದ್ದಾರೆ. ಈ ವಿಚಾರವನ್ನು ಸ್ವತಃ ಕಾಜಲ್​ ಅವರೇ ಈ ಹಿಂದೆ ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದರು. (ಏಜೆನ್ಸೀಸ್​)

    ಟಾಲಿವುಡ್​ ಬ್ಯೂಟಿ ಕಾಜಲ್​ ಮದುವೆ ಫಿಕ್ಸ್​: ಕೊನೆಗೂ ವದಂತಿಗೆ ತೆರೆಎಳೆದ ಮಗಧೀರನ ಬೆಡಗಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts