More

    VIDEO: ಓವರ್‌ಗೆ ಆರು ಸಿಕ್ಸರ್; ಯುವರಾಜ್, ಗಿಬ್ಸ್ ಜತೆ ಸಿಕ್ಸರ್ ಕ್ಲಬ್ ಸೇರಿದ ಕೈರಾನ್ ಪೊಲ್ಲಾರ್ಡ್,

    ಕೂಲಿಡ್ಜ್ (ಆಂಟಿಗುವಾ): ಶ್ರೀಲಂಕಾದ ಲೆಗ್ ಸ್ಪಿನ್ನರ್ ಅಖಿಲ ಧನಂಜಯ್ (62ಕ್ಕೆ 3) ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಬೀಗಿದರೂ ಮರು ನಿಮಿಷದಲ್ಲೇ ಸ್ಫೋಟಕ ಬ್ಯಾಟ್ಸ್‌ಮನ್ ಕೈರಾನ್ ಪೊಲ್ಲಾರ್ಡ್ (38ರನ್, 11 ಎಸೆತ, 6 ಸಿಕ್ಸರ್) ಅವರಿಗೆ 6 ಎಸೆತಗಳಿಗೆ 6 ಸಿಕ್ಸರ್ ಬಿಟ್ಟುಕೊಟ್ಟರು. ಇದರೊಂದಿಗೆ ಪೊಲ್ಲಾರ್ಡ್ ಓವರ್‌ಗೆ 6 ಸಿಕ್ಸರ್ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಪೊಲ್ಲಾರ್ಡ್ ಅಬ್ಬರದಿಂದಾಗಿ ವೆಸ್ಟ್ ಇಂಡೀಸ್ ತಂಡ 4 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು. 3 ಪಂದ್ಯಗಳ ಸರಣಿಯಲ್ಲಿ ವಿಂಡೀಸ್ 1-0 ಯಿಂದ ಮುನ್ನಡೆ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 9 ವಿಕೆಟ್‌ಗೆ 131 ರನ್‌ಗಳಿಸಿದರೆ, ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡ 13.1 ಓವರ್‌ಗಳಲ್ಲಿ 6 ವಿಕೆಟ್‌ಗೆ 134 ರನ್ ಪೇರಿಸಿತು.

    ಇದನ್ನೂ ಓದಿ: ಬಜಾರಿ ಶರಣ್ಯ; 1980ರ ಚಿತ್ರದಲ್ಲಿ ವಿಶೇಷ ಪಾತ್ರ

    ಲಂಕಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಡಿವಾಣ ಹಾಕಿ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ, ಲೆಂಡ್ಲೆ ಸಿಮ್ಮನ್ಸ್ (26ರನ್, 15 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಎವಿನ್ ಲೆವಿಸ್ (28ರನ್, 10 ಎಸೆತ, 2 ಬೌಂಡರಿ, 3 ಸಿಕ್ಸರ್) ಜೋಡಿ 20 ಎಸೆತಗಳಲ್ಲಿ 52 ರನ್ ಕಲೆಹಾಕಿತು. 4ನೇ ಓವರ್‌ನ 2ನೇ ಎಸೆತದಲ್ಲಿ ಧನಂಜಯ್ ಈ ಜೋಡಿಗೆ ಬ್ರೇಕ್ ಹಾಕಿದರು. ಬಳಿಕ 3ನೇ ಹಾಗೂ 4ನೇ ಎಸೆತದಲ್ಲಿ ಕ್ರಿಸ್ ಗೇಲ್ (0)ಹಾಗೂ ನಿಕೋಲಸ್ ಪೂರನ್ (0) ಕೂಡ ಸತತ ಎರಡು ಎಸೆತಗಳಲ್ಲಿ ವಿಕೆಟ್ ನೀಡಿದರು. ಧನಂಜಯ್ ಎಸೆತದ ಇನಿಂಗ್ಸ್‌ನ 6ನೇ ಓವರ್‌ನಲ್ಲಿ ಪೊಲ್ಲಾರ್ಡ್ 6 ಎಸೆತಗಳನ್ನೂ ಬೌಂಡರಿಯಿಂದ ಆಚೆಗೆ ಅಟ್ಟಿದರು.

    ಶ್ರೀಲಂಕಾ: 9 ವಿಕೆಟ್‌ಗೆ 131 (ನಿರೊಶಾನ್ ಡಿಕ್‌ವೆಲ್ಲಾ 33, ಪಥುಮ್ ನಿಸಾಕ 39, ಒಬೆದ್ ಮೆಕ್‌ಕೊಯ್ 25ಕ್ಕೆ 2), ವೆಸ್ಟ್ ಇಂಡೀಸ್: 13.1 ಓವರ್‌ಗಳಲ್ಲಿ 6 ವಿಕೆಟ್‌ಗೆ 134 (ಲೆಂಡ್ಲೆ ಸಿಮ್ಮನ್ಸ್ 26, ಎವಿನ್ ಲೆವೀಸ್ 28, ಕೈರಾನ್ ಪೊಲ್ಲಾರ್ಡ್ 38, ಜೇಸನ್ ಹೋಲ್ಡರ್ 29*, ಅಖಿಲಾ ಧನಂಜಯ್ 62ಕ್ಕೆ 3, ಹಸರಂಗ ಡಿ ಸಿಲ್ವಾ 12ಕ್ಕೆ 3).

    * 3: ಕೈರಾನ್ ಪೊಲ್ಲಾರ್ಡ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು 2007ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಯುವರಾಜ್ ಸಿಂಗ್, ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಈ ಸಾಧನೆ ಮಾಡಿದ್ದರೆ, 2007 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ನೆದರ್ಲೆಂಡ್ಸ್‌ನ ಡಾನ್ ವ್ಯಾನ್ ಬುಂಗೆ ಎದುರು ಈ ಸಾಧನೆ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts