More

    ದೇವರಾಜು ಅರಸು ಪ್ರಶಸ್ತಿಗೆ ಕಾಗೋಡು ತಿಮ್ಮಪ್ಪ ಅರ್ಹ

    ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಈ ಸಾಲಿನ ದೇವರಾಜ ಅರಸು ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಪ್ರಮುಖರು ಗುರುವಾರ ಜಿಲ್ಲಾಽಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಸಮಾಜದಲ್ಲಿ ತುಳಿತಕ್ಕೊಳಗಾದವರು, ಬಡಜನರ ಪರವಾದ ಸಿದ್ಧಾಂತಗಳನ್ನು ಹೊಂದಿದೆ. ಸಮಾಜಮುಖಿ ಕಾರ್ಯಗಳಿಂದ ಗಮನಸೆಳೆದವರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ದೇವರಾಜ ಅರಸು ಹೆಸರಿನಲ್ಲಿ ಪ್ರಶಸ್ತಿ ನೀಡುತ್ತದೆ. ಈ ವರ್ಷ ಅದನ್ನು ಕಾಗೋಡು ತಿಮ್ಮಪ್ಪ ಅವರಿಗೆ ನೀಡಬೇಕು. ಪ್ರಶಸ್ತಿ ಸ್ವೀಕರಿಸಲು ಎಲ್ಲ ರೀತಿಯಲ್ಲೂ ಅವರು ಅರ್ಹರಿದ್ದಾರೆ ಎಂದರು.
    ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದರು. ಅವರ ಭೂಸುಧಾರಣಾ ಕಾಯ್ದೆಯಿಂದ ಸಾವಿರಾರು ಮಂದಿ ಭೂಒಡೆತನ ಪಡೆಯುವಂತಾಯಿತು. ೧೯೭೩-೭೪ರಲ್ಲಿ ಭೂಸುಧಾರಣಾ ಕಾಯ್ದೆಗಳ ನಿರೂಪಣಾ ಜಂಟಿ ಸಲಹಾ ಸಮಿತಿಯಲ್ಲಿ ಕಾಗೋಡು ತಿಮ್ಮಪ್ಪ ಕೆಲಸ ಮಾಡಿದ್ದರು. ಅರಸು ಅವರಂತೆಯೇ ದುಡಿಯುವ ವರ್ಗದ ಹಿತಕ್ಕಾಗಿ ಶ್ರಮಿಸಿದವರು ಕಾಗೋಡು. ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರೆ ಯಾವುದೇ ಲೋಪವಾಗುವುದಿಲ್ಲ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
    ಕಾಗೋಡು ತಿಮ್ಮಪ್ಪನವರು ಇಳಿವಯಸ್ಸಿನಲ್ಲೂ ಸಾರ್ವಜನಿಕ ಜೀವನದಲ್ಲಿದ್ದಾರೆ. ಅರಸು ಅವರ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಅವರನ್ನೇ ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.
    ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಎಸ್.ವಿ. ರಾಜಮ್ಮ, ಎನ್.ನಾಗೇಶ್ ರಾವ್, ಆದಿಶೇಷ, ಶಿವಣ್ಣ, ಜಿ.ಎಸ್.ಸುರೇಶ್, ಶಂಕ್ರಾನಾಯ್ಕ, ನರಸಿಂಹ ಮೂರ್ತಿ, ಜಿ.ವಿ.ಮಂಜುಳಾ, ಎಚ್.ಎಂ. ಸಂಗಯ್ಯ, ಮಂಜುನಾಥ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts