More

    ಕಾಡಸಿದ್ಧೇಶ್ವರ ಕಲಶೋತ್ಸವ ಸಂಪನ್ನ

    ರಬಕವಿ/ಬನಹಟ್ಟಿ: ಬನಹಟ್ಟಿಯ ಆರಾಧ್ಯ ದೈವ ಕಾಡಸಿದ್ಧೇಶ್ವರ ಜಾತ್ರೆಯ 3ನೇ ಹಾಗೂ ಕೊನೆಯ ದಿನ ಗುರುವಾರ ರಾತ್ರಿ ಕಾಡಸಿದ್ಧೇಶ್ವರ ಕಲಶೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾತ್ರೆ ಸಂಪನ್ನಗೊಂಡಿತು.

    ಮಂಗಳವಾರ ಪೇಟೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ನಂದಿಕೋಲು, ಕರಡಿ ಮಜಲು ಸನಾದಿ ಹಾಗೂ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು. ಸೋಮವಾರ ಪೇಟೆಯ ಶಂಕರ ಜುಂಜಪ್ಪನವರ ನಿವಾಸದವರೆಗೆ ತೆರಳಿದ ಕಲಶೋತ್ಸವ ಮರಳಿ ರಥದ ಸ್ಥಳಕ್ಕೆ ಬಂದು ತಲುಪಿತು. ಪೊಲೀಸರು ಭದ್ರತೆ ಒದಗಿಸಿದ್ದರು. ನಗರದ ಹಿರಿಯರಾದ ಶ್ರೀಶೈಲ ದಬಾಡಿ, ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಮಲ್ಲಪ್ಪ ಜನವಾಡ, ಮಹಾಶಾಂತ ಶೆಟ್ಟಿ, ಶೇಖರ ಸಂಪಗಾಂವಿ, ಶ್ರೀಶೈಲ ಯಾದವಾಡ, ಶಂಕರ ಕೆಸರಗೊಪ್ಪ, ಬಸಯ್ಯ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts