More

    ಕದಲೂರು ಉದಯ್ ಸಮಾಜ ಸೇವೆ ಶ್ಲಾಘನೀಯ

    ಕೆ.ಎಂ.ದೊಡ್ಡಿ: ದುಡಿದದ್ದೆಲ್ಲ ನನಗೆ ಇರಲಿ ಎಂಬ ಸ್ವಾರ್ಥ ಭಾವನೆ ಹೆಚ್ಚಾಗಿರುವ ಇಂತಹ ಕಾಲಘಟ್ಟದಲ್ಲೂ ಕದಲೂರು ಉದಯ್ ಅವರ ನಿಸ್ವಾರ್ಥ ಸಮಾಜ ಸೇವೆ ಶ್ಲಾಘನೀಯ ಎಂದು ಚಿತ್ರನಟ ದರ್ಶನ್ ಅಭಿಪ್ರಾಯಪಟ್ಟರು.

    ಹಲಗೂರು ರಸ್ತೆಯ ಚಾಂಶುಗರ್ಸ್‌ ಸಕ್ಕರೆ ಕಾರ್ಖಾನೆ ಸಮೀಪ ಸೋಮವಾರ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸೇವಾ ಹೆಜ್ಜೆ ಮೂರರ ಸಂಭ್ರಮ ಹಾಗೂ ಉದಯಯಾನ 2.0 ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇಂದು ದುಡಿಯುವ ಕೈಗಳಿಗೆ ಕೆಲಸವಿಲ್ಲದಾಗಿದೆ. ಅದೇ ರೀತಿ ಶ್ರಮವೂ ಮರೆಯಾಗಿದೆ. ಚುನಾವಣೆ ನಂತರವೂ ನಿರಂತರ ಸಮಾಜಸೇವೆಯಲ್ಲಿ ನಿರತವಾಗಿರುವ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಕಾರ್ಯವೈಖರಿ ಸಾರ್ಥಕವಾಗಲಿ ಎಂದು ಹಾರೈಸಿದರು.

    ಚಿತ್ರನಟ ಚಿಕ್ಕಣ್ಣ ಮಾತನಾಡಿ, ಸಂಪತ್ತು ದೊಡ್ಡದಲ್ಲ. ಬದಲಾಗಿ ಇರುವುದನ್ನು ಅನ್ಯರಿಗೆ ಹಂಚವುದು ದೊಡ್ಡತನ. ಆ ಕಾರ್ಯದಲ್ಲಿ ನಿರತರಾಗಿರುವ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮೂರರ ಸಂಭ್ರಮ ನೂರಾಗಲಿ ಎಂದು ಹಾರೈಸಿದರು.

    ಕಾರ್ಯಕ್ರಮದಲ್ಲಿ ಕೃಷಿ, ಹೈನುಗಾರಿಕೆ, ಸಾವಯವ ಕೃಷಿ, ರೇಷ್ಮೆ ಹಾಗೂ ಕರಕುಶಲ ವೃತ್ತಿಗಾರರನ್ನು ಅಭಿನಂದಿಸಲಾಯಿತು. ಶಾಸಕ ಕದಲೂರು ಉದಯ್, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಉದಯ್, ಚಿತ್ರನಟ ಯಶಸ್, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಬಸವರಾಜು, ಜಿಪಂ ಮಾಜಿ ಸದಸ್ಯ ಅಣ್ಣೂರು ರಾಜೀವ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಉದ್ಯಮಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಮುಖಂಡರಾದ ಸಿಪಾಯಿ ಶ್ರೀನಿವಾಸ್, ದಿನೇಶ್‌ಬಾಬು, ರವಿ, ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts