More

    ಹನ್ನೊಂದು ಜನರ ಸಾವಿಗೆ ಕಾರಣವಾಯಿತು ಕಾಬೂಲ್ ಗುರುದ್ವಾರದ ಮೇಲಿನ ಉಗ್ರ ದಾಳಿ: ಹೊಣೆಗಾರಿಕೆ ಹೊತ್ತುಕೊಂಡಿತು ಐಸಿಸ್

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಸಿಖ್ಖರ ಪ್ರಾರ್ಥನಾ ಮಂದಿರದ ಮೇಲೆ ಬುಧವಾರ ಉಗ್ರ ದಾಳಿ ನಡೆದಿದ್ದು, ಹನ್ನೊಂದು ಜನ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲೇ ಈ ದಾಳಿ ನಡೆದಿದ್ದು, ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಇಂತಹ ಡೆಡ್ಲಿ ಅಟ್ಯಾಕ್ ನಡೆದಿರುವುದು ಇದೇ ಮೊದಲ ಸಲ ಎಂದು ಮಾಧ್ಯಮಗಳು ವರದಿಮಾಡಿವೆ.

    ಕಾಬೂಲ್‍ನ ಶೋರ್ ಬಜಾರ್ ಏರಿಯಾದಲ್ಲಿ ಸ್ಥಳೀಯ ಕಾಲಮಾನ ಬುಧವಾರ ಬೆಳಗ್ಗೆ 7.45ಕ್ಕೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 150 ಭಕ್ತರು ಗುರುದ್ವಾರದ ಒಳಗೆ ಇದ್ದರು. ದಾಳಿ ಇನ್ನೂ ಮುಂದುವರಿದಿದ್ದು, ಭದ್ರತಾ ಪಡೆಗಳು ಭಕ್ತರ ರಕ್ಷಣಾ ಕಾರ್ಯಾಚರಣೆ ಮುನ್ನಡೆಸಿವೆ. ಈ ನಡುವೆ, 11 ಮಕ್ಕಳನ್ನು ಗುರುದ್ವಾರದ ಒಳಗಿನಿಂದ ಬಚಾವ್ ಮಾಡಲಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

    ಇಸ್ಲಾಮಿಕ್ ಸ್ಟೇಟ್ಸ್ ಗ್ರೂಪ್‍ (ಐಸಿಸ್‍) ಉಗ್ರ ಸಂಘಟನೆ ಈ ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿದೆ. ಹಳೆ ಕಾಬೂಲ್‍ನಲ್ಲಿರುವ ಈ ಪ್ರದೇಶವನ್ನು ರಕ್ಷಣಾ ಪಡೆಗಳು ಸುತ್ತುವರಿದಿವೆ. ಬಂದೂಕುಧಾರಿಗಳ ಮೇಲೆ ಪ್ರತಿದಾಳಿ ಆರಂಭವಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

    ಇತ್ತೀಚಿನ ಮಾಹಿತಿ ಪ್ರಕಾರ, ಈ ದಾಳಿ ಮತ್ತು ರಕ್ಷಣಾ ಕಾರ್ಯಾಚರಣೆ ವಿಚಾರವಾಗಿ ಇಂಟೀರಿಯರ್ ಮಿನಿಸ್ಟ್ರಿ ವಕ್ತಾರ ತಾರಿಕ್ ಅರಿಯನ್‍ ಟ್ವೀಟ್ ಮಾಡಿದ್ದು, ಸಿಖ್ ಗುರುದ್ವಾರದ ಮೊದಲ ಮಹಡಿಯನ್ನು ತೆರವುಗೊಳಿಸಲಾಗಿದೆ. ಕಟ್ಟಡದೊಳಗೆ ಸಿಲುಕಿದ್ದ ಹಲವರನ್ನು ಹೊರ ಕರೆತರಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

    ಇದಕ್ಕೂ ಮುನ್ನ ಈ ದಾಳಿಯನ್ನು ಅಲ್ಲಿಯದ್ದೇ ಉಗ್ರ ಸಂಘಟನೆ ತಾಲೀಬಾನ್ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಅದು ಈ ದಾಳಿಯ ಹೊಣೆಗಾರಿಕೆಯನ್ನು ನಿರಾಕರಿಸಿತ್ತು. ಈ ಸಂಬಂಧ ಅದರ ವಕ್ತಾರ ಜಬೀವುಲ್ಲಾ ಮುಜಾಹಿದ್  ಶೋರ್ ಬಜಾರ್ ಪ್ರದೇಶದಲ್ಲಿನ ದಾಳಿಗೂ ತಮಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಖಮಾ ನ್ಯೂಸ್ ಏಜೆನ್ಸಿ ವರದಿ ಮಾಡಿತ್ತು.

    ಕಾಬೂಲ್‍ನ ಗುರುದ್ವಾರದ ಮೇಲೆ ನಡೆದಿರುವ ಉಗ್ರದಾಳಿಯ ವಿಚಾರವಾಗಿ ನಾನು ದುಃಖಿತನಾಗಿದ್ದೇನೆ. ಅಲ್ಲಿ ಪ್ರಾಣ ಬಲಿದಾನ ಮಾಡಿಕೊಂಡವರ ಕುಟುಂಬದವರಿಗೆ ನನ್ನ ಸಂತಾಪವನ್ನು ಸೂಚಿಸುತ್ತಿದ್ದೇನೆ.

                         | ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿ

    (ಏಜೆನ್ಸೀಸ್) 

    ಕರೊನಾ ವಾರಿಯರ್ಸ್ ಜತೆಗೆ ಸಹಕರಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ ಪ್ರಧಾನಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts