More

    ಟ್ರಾಫಿಕ್ ಪೊಲೀಸ್ ಆಯ್ತು, ಜರ್ನಲಿಸ್ಟ್ ಆಯ್ತು… ಈಗ ಜಿಮ್​​ನಲ್ಲಿ ವರ್ಕೌಟ್​ಗಿಳಿದ ತಾಲಿಬಾನಿಗಳು

    ಕಾಬೂಲ್: ಕಳೆದ ಹಲವು ದಿನಗಳಿಂದ ಆಫ್ಘಾನಿಸ್ತಾನದಲ್ಲಿ ರಕ್ತಬಿಜಾಸುರರಂತೆ ಆಡಿ ಇಡೀ ದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನ್​ ಉಗ್ರರು ಈಗ ಎಂಜಾಯ್​ ಮೂಡ್​ನಲ್ಲಿದ್ದಾರೆ. ಪಾರ್ಕ್​ನಲ್ಲಿ ಮಂಗನಾಟ ಆಡಿದ್ದ ತಾಲಿಬಾನಿಗಳು, ಈಗ ಜಿಮ್​​ನಲ್ಲಿ ಬೆವರಿಳಿಸುತ್ತಿರುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.

    ಒಂದೆಡೆ ಅಫ್ಘಾನ್ ಪ್ರಜೆಗಳು ಜೀವವನ್ನೇ ಪಣಕ್ಕಿಟ್ಟು ದೇಶ ತೊರೆಯುತ್ತಿದ್ದರೆ, ಇತ್ತ ಗೆಲುವಿನ ಬಳಿಕ ತಾಲಿಬಾನಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಇದಕ್ಕೂ ಮುಂಚೆ ಅಮ್ಯೂಸ್​​ಮೆಂಟ್ ಪಾರ್ಕ್​ಗೆ ತೆರಳಿದ ತಾಲಿಬಾನಿಗಳು ಅಲ್ಲಿ ಆಟಿಕೆಗಳ ಮೇಲೆ ಮಂಗನಾಟ ಆಡಿರುವ ವಿಡಿಯೋ ವೈರಲ್ ಆಗಿತ್ತು.

    ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡ ನಂತರ ತಾಲಿಬಾನ್​ಗಳ ಹುಚ್ಚಾಟ ಮುಂದುವರೆದಿದೆ. ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುವ ತಾಲಿಬಾನ್​ಗಳು ಇದೀಗ ತಮ್ಮ ಆಡಳಿತವನ್ನು ಶುರು ಮಾಡಿದ್ದಾರೆ.
    ಒಂದೆಡೆ ಗನ್​ ಹಿಡಿದುಕೊಂಡು ಟ್ರಾಫಿಕ್​ ಕಂಟ್ರೋಲ್​ ಮಾಡುತ್ತಾ ಟ್ರಾಫಿಕ್​ ಪೊಲೀಸ್​ ಆಗಿದ್ದರೆ, ಇನ್ನೊಂದೆಡೆ ಕೈಯಲ್ಲಿ ಮೈಕ್​ ಹಿಡಿದು ಜರ್ನಲಿಸ್ಟ್​ ಆಗಿರುವ ತಾಲಿಬಾನಿಗಳು, ಇಂದಿನ ಪರಿಸ್ಥಿತಿಯ ಬಗ್ಗೆ ಜನಸಾಮಾನ್ಯರಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

    VIDEO: ಮೈಕ್​ ಹಿಡಿದು ಜರ್ನಲಿಸ್ಟ್​, ಗನ್​ ಹಿಡಿದು ಟ್ರಾಫಿಕ್​ ಪೊಲೀಸ್​, ತಾಲಿಬಾನಿಗಳ ನಡುವೆ ಪತ್ರಕರ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts